Published
4 months agoon
By
Akkare News
ಜಯ ಕರ್ನಾಟಕ ಜನಪರ ವೇದಿಕೆ ದ.ಕ ಜಿಲ್ಲಾ ವತಿಯಿಂದ ಸಂಘಟನೆಯ ವಾರ್ಷಿಕೋತ್ಸವದ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಖಾಟು ಶ್ಯಾಮ್ ಟ್ರೋಫಿ ಕಬಡ್ಡಿ ಪಂದ್ಯಾಟದ ವೇದಿಕೆಯಲ್ಲಿ ಆಚರಿಸಲಾಯಿತು.
ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಹಗಲಿರುಳು ದುಡಿಯುವ ಮೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಗಳನ್ನು ಗೌರವಿಸಿ, ಗಿಫ್ಟ್ ನೀಡಿ ಸನ್ಮಾನಿಸಲಾಯಿತು.

ಮೆಸ್ಕಾಂ ಇಲಾಖೆಯ ಓಲ್ವಾಲ್ಡ್ ನವೀನ್ ಡಿ ಸೋಜ, ಬಾಲಕೃಷ್ಣ ಗೌಡ, ಚಂದ್ರಹಾಸ ಕೆ, ಶಿವಪ್ರಸಾದ್ ಕೆ, ರವೀಂದ್ರ ಕೆ, ಚಂದಪ್ಪ ಪೂಜಾರಿ, ಹನುಮಂತ್ರಾಯ ಗೌಡರ್, ಭೀಮರಾಯ ಕುಂಬಳೆ, ಸಹಜಾನಂದಯ್ಯ ಹಿರೇಮಠ, ಪ್ರಶಾಂತ್ ಹಲಗಿ, ರಿಯಾಜ್ ಅಹ್ಮದ್, ಇಮಾಮ್ ಹುಸೇನ್, ಹನುಮಂತ ಪಿ ಇವರನ್ನು ಗೌರವಿಸಿ ಗೌರವಿಸಿ ಸನ್ಮಾನಿಸಲಾಯಿತು.


ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಲಯನ್ ಸುದರ್ಶನ್ ಪಡಿಯಾರ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕರಾದ ರಾಮ್ ದಾಸ್ ಶೆಟ್ಟಿ, ದ ಕ ಜಿಲ್ಲಾಧ್ಯಕ್ಷರಾದ ಕಾರ್ತಿಕ್ ರೈ, ಕಾರ್ಯಕಾರಿಣಿ ಸದಸ್ಯರಾದ ತಿಲಕ್ ರಾಜ್ ಶೆಟ್ಟಿ, ಅಕಾಶ್, ರಾಜೇಶ್ ನಾಯಕ್, ನಿತಿನ್, ರವಿ ಹಾಗೂ BARBARIK ತಂಡದ ಮುಖ್ಯಸ್ಥರಾದ ಆದಿತ್ಯ ಪಡಿಯಾರ್ ಹಾಗೂ ಕೃಷ್ ವಿ ಶೆಟ್ಟಿ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.






