Published
4 months agoon
By
Akkare News
ಕಬ್ಬು ಬೆಳೆಗಾರರ ಬೇಡಿಕೆ ಕೊನೆಗೂ ಈಡೇರಿದೆ, ಅಷ್ಟಕ್ಕೂ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಭಾರಿ ಅನ್ಯಾಯ ಆಗಿದೆ ಅಂತಾ ಆರೋಪಿಸಿ ದೊಡ್ಡ ಮಟ್ಟದ ಹೋರಾಟ ಶುರುವಾಗಿತ್ತು. ಇದೇ ಸಮಯದಲ್ಲಿ ಕಬ್ಬು ಬೆಳೆಗಾರರ ಹೋರಾಟವನ್ನ ಇಡೀ ರಾಜ್ಯಾದ್ಯಂತ ವಿಸ್ತರಿಸಲು ಹೋರಾಟಗಾರರು ಚಿಂತನೆ ಹಾಗೂ ಚರ್ಚೆ ನಡೆಸಿದ್ದರು.


ಈ ಮಧ್ಯೆ ಇಂದು ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸುವಾಗಲೇ ಕಲ್ಲು ತೂರಾಟ ಕೂಡ ನಡೆದು ಹೋಗಿತ್ತು. ಹೀಗೆ ಕಬ್ಬು ಬೆಳೆಗಾರರ ಹೋರಾಟ ಜೋರಾಗುತ್ತಿದ್ದಂತೆ ಈ ಬಗ್ಗೆ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಸರ್ಕಾರ, 3,300 ರೂಪಾಯಿ ಬೆಂಬಲ ಬೆಲೆ ಫಿಕ್ಸ್ ಮಾಡಿದೆ.








