Connect with us

ಇತರ

ಎಲ್.ಕೆ ಅಡ್ವಾಣಿಯನ್ನು ಹಾಡಿ ಹೊಗಳಿದ ಶಶಿ ತರೂರ್ : ಅಂತರ ಕಾಯ್ದುಕೊಂಡ ಕಾಂಗ್ರೆಸ್

Published

on

ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರನ್ನು ‘ನಿಜವಾದ ಮುತ್ಸದ್ದಿ’ ಎಂದು ಬಣ್ಣಿಸಿದ ಪಕ್ಷದ ಸಂಸದ ಶಶಿ ತರೂರ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ.

ಶನಿವಾರ (ನ.8) ಅಡ್ವಾಣಿಯವರ 98ನೇ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟ್ ಹಾಕಿ ಶುಭಾಶಯ ಕೋರಿದ್ದ ತರೂರ್, “ಸಾರ್ವಜನಿಕ ಸೇವೆಗೆ ಅಡ್ವಾಣಿಯವರ ಅಚಲ ಬದ್ಧತೆ, ಅವರ ನಮ್ರತೆ ಮತ್ತು ಸಭ್ಯತೆ ಹಾಗೂ ಆಧುನಿಕ ಭಾರತದ ಪಥವನ್ನು ರೂಪಿಸುವಲ್ಲಿ ಅವರ ಪಾತ್ರ ಶ್ಲಾಘಿಣೀಯ” ಎಂದಿದ್ದರು. “ಅಡ್ವಾಣಿ ನಿಜವಾದ ರಾಜಕಾರಣಿ, ಅವರ ಸೇವಾ ಜೀವನವು ಅನುಕರಣೀಯವಾಗಿದೆ” ಎಂದು ಕೊಂಡಾಡಿದ್ದರು.

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ತರೂರ್ ಅವರು ಅಡ್ವಾಣಿ ಅವರನ್ನು ಹೊಗಳಿದ್ದನ್ನು ಪ್ರಶ್ನಿಸಿದ್ದಾರೆ, 1980ರ ದಶಕದ ಉತ್ತರಾರ್ಧದಲ್ಲಿ ಮತ್ತು 1990ರ ದಶಕದ ಆರಂಭದಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಅಡ್ವಾಣಿ ರ‍್ಯಾಲಿ ನಡೆಸಿದ್ದನ್ನು ತರೂರ್‌ಗೆ ನೆನಪಿಸಿದ್ದಾರೆ.

ತರೂರ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದವರಲ್ಲಿ ವಕೀಲ ಸಂಜಯ್ ಹೆಗ್ಡೆ ಕೂಡ ಒಬ್ಬರು. “ಕ್ಷಮಿಸಿ ತರೂರ್, ಈ ದೇಶದಲ್ಲಿ ದ್ವೇಷದ ಬೀಜಗಳನ್ನು ಬಿತ್ತುವುದು ಸಾರ್ವಜನಿಕ ಸೇವೆಯಲ್ಲ” (ಖುಷ್ವಂತ್ ಸಿಂಗ್ ಅವರ ಮಾತುಗಳನ್ನು ಉಲ್ಲೇಖಿಸಿ) ಎಂದು ಭಾನುವಾರ (ನ.9) ಸಂಜಯ್‌ ಹೆಗ್ಡೆ ಹೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ತರೂರ್, “ಅಡ್ವಾಣಿ ಅವರ ದೀರ್ಘ ರಾಜಕೀಯ ವೃತ್ತಿಜೀವನವನ್ನು ಒಂದು ಘಟನೆಗೆ ಮಾತ್ರ ಸೀಮಿತಗೊಳಿಸುವುದು, ಅದು ಎಷ್ಟೇ ಮಹತ್ವದ್ದಾಗಿದ್ದರೂ ಅನ್ಯಾಯ. ನೆಹರೂ ಅವರ ವೃತ್ತಿಜೀವನದ ಸಂಪೂರ್ಣತೆಯನ್ನು ಚೀನಾ ಸೋಲಿನಿಂದ ಮಾತ್ರ, ಅದೇ ರೀತಿ ಇಂದಿರಾ ಗಾಂಧಿಯವರ ಜೀವನವನ್ನು ತುರ್ತುಪರಿಸ್ಥಿತಿಯಿಂದ ಮಾತ್ರ ನಿರ್ಣಯಿಸಲಾಗದು. ನಾವು ಅದೇ ಗೌರವವನ್ನು ಅಡ್ವಾಣಿ ಅವರಿಗೂ ಕೊಡಬೇಕು” ಎಂದು ವಾದಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement