Published
3 months agoon
By
Akkare News
ಸರ್ಕಾರದ ಆದೇಶದಂತೆ ಪ್ರೇಮಾನಂದ ಬಿ ಅವರನ್ನು ಅಬಕಾರಿ ಉಪ ನಿರೀಕ್ಷಕರನ್ನಾಗಿ (Excise Sub-Inspector) ಪದೋನ್ನತಿಗೊಳಿಸಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ವಲಯಕ್ಕೆ ನೇಮಕ ಮಾಡಲಾಗಿದೆ..

ಪ್ರೇಮಾನಂದ ಬಿ ಅವರು ತಮ್ಮ 20 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಮಂಗಳೂರು, ಉಡುಪಿ, ಕುಂದಾಪುರ ಮತ್ತು ಭಟ್ಕಳದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಅಬಕಾರಿ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶೇಷವಾಗಿ ಪುತ್ತೂರಿನಲ್ಲಿ ಪ್ರೇಮಾನಂದ ಅವರು ಸಲ್ಲಿಸಿದ ಸುದೀರ್ಘ 8 ವರ್ಷಗಳ ಸೇವೆಯು ಸ್ಮರಣೀಯವಾಗಿದೆ. 
ಇದೀಗ ಪ್ರೇಮಾನಂದ ಅವರು ಪದೋನ್ನತಿ ಹೊಂದಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ವಲಯದ ಅಬಕಾರಿ ಉಪ ನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಅವರು ಪುತ್ತೂರಿನ ಆರಾಧ್ಯ ಲೇಔಟ್ ನಲ್ಲಿ ವಾಸವಾಗಿರುತ್ತಾರೆ.







