Published
2 months agoon
By
Akkare News
ಪುತ್ತೂರು: ಬಂಟ್ವಾಳದ ಪೆರ್ನೆಯಿಂದ ಹರಡುತ್ತಿರುವ ಬೆಂಕಿ ಬನ್ನೂರು ಗ್ರಾಮದ ಸೇಡಿಯಾಪು ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದ ಬಳಿ ಗೇರು ತೋಪಿಗೆ ಹರಡಿದ್ದು ಅದನ್ನು ನಂದಿಸುವಲ್ಲಿ ಅಗ್ನಿಶಾಮಕದಳ, ಅರಣ್ಯ ಮತ್ತು ಗೇರು ಇಲಾಖೆ ಹರಸಾಹಸ ಪಡುತ್ತಿರುವ ನಡುವೆ ಅರಣ್ಯ ವೀಕ್ಷಕರೊಬ್ಬರಿಗೆ ವಿಷದ ಹಾವು ಕಡಿತಗೊಂಡ ಘಟನೆ ನಡೆದಿದೆ.

ತಕ್ಷಣ ನಡುತೋಪು ಅಧೀಕ್ಷರಾದ ರವಿಪ್ರಸಾದ್ ಅವರು ಗಾಯಾಳುವುವನ್ನು ಕಾರಿನಲ್ಲಿ ಪುತ್ತೂರು ಆಸ್ಪತ್ರೆಗೆ ಸೇರಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.









