Connect with us

ಇತರ

ಜ.14 ಶಬರಿಮಲೆ ಅಯ್ಯಪ್ಪ ಸನ್ನಿಧಾನ ಮಕರಜ್ಯೋತಿ ಮಹೋತ್ಸವಕ್ಕೆ ಸಜ್ಜು. ಜ.12ರಂದು ಪಂದಳಂನಿಂದ ತಿರುವಾಭರಣಗಳ ಮೆರವಣಿಗೆ. ಜ.14ರಂದು ಮಕರಜ್ಯೋತಿ ದರ್ಶನ

Published

on

ಶಬರಿಮಲೆ ಅಯ್ಯಪ್ಪ ಸನ್ನಿಧಾನ ಮಕರಜ್ಯೋತಿ ಮಹೋತ್ಸವಕ್ಕೆ ಸಜ್ಜಾಗಿದೆ. ಜ.12ರಂದು ಪಂದಳಂನಿಂದ ತಿರುವಾಭರಣಗಳ ಮೆರವಣಿಗೆ ಹೊರಡಲಿದ್ದು, ಜ.14ರಂದು ಸಂಜೆ ಸನ್ನಿಧಾನ ತಲುಪಲಿದೆ. ಮಕರಜ್ಯೋತಿ ದರ್ಶನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧಗಳಿದ್ದು, ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಕಾಸರಗೋಡು:ಮಕರಜ್ಯೋತಿ ಮಹೋತ್ಸವಕ್ಕೆ ಶಬರಿಮಲೆಅಯ್ಯಪ್ಪ ಸನ್ನಿಧಾನ ಸಜ್ಜುಗೊಂಡಿದೆ‌. ಮಕರಜ್ಯೋತಿಯಂದು ಶಬರೀಶನಿಗೆ ತೊಡಿಸಲಾಗುವ ತಿರುವಾಭರಣಗಳ ಮೆರವಣಿಗೆ ಜ.12ರಂದು ಮಧ್ಯಾಹ್ನ 1 ಗಂಟೆಗೆ ಪಂದಳಂ ವಲಿಯ ಕೋಯಿಕ್ಕಲ್ ಶ್ರೀ ಧರ್ಮಶಾಸ್ತ ದೇವಸ್ಥಾನದಿಂದ ಹೊರಡಲಿದೆ. ಜ.14ರಂದು ತಿರುವಾಭರಣ ಮೆರವಣಿಗೆ ಸನ್ನಿಧಾನ ತಲುಪಲಿದೆ.

ಈ ಬಾರಿ ಪಂದಳಂ ಅರಮನೆಯ ರಾಜ ಪ್ರತಿನಿಧಿಯಾಗಿ ಪುನರ್ಧಂನಾಳ್ ನಾರಾಯಣ ವರ್ಮ ಮೆರವಣಿಗೆಯನ್ನು ಮುನ್ನಡೆಸುವರು. ಗುರು ಸ್ವಾಮಿ ಮರುದಮನ ಶಿವನಕುಟ್ಟಿ ನೇತೃತ್ವದಲ್ಲಿ 26 ಮಂದಿಯ ತಿರುವಾಭರಣ ವಾಹಕ ಸಂಘ ಮತ್ತು 4 ಮಂದಿ ಸಹಾಯಕರು ಸಹಿತ 30 ಸದಸ್ಯರ ತಂಡ ತಿರುವಾಭರಣ ಪೆಟ್ಟಿಗೆಯನ್ನು ಹೊತ್ತು ಶಬರಿಮಲೆಗೆ ತಲುಪಿಸುವರು.

Continue Reading
Click to comment

Leave a Reply

Your email address will not be published. Required fields are marked *

Advertisement