Connect with us

ಇತರ

ಬೆಳ್ಳಿಪ್ಪಾಡಿ ಕಠರಾ ಪರಿಸರ ದಲ್ಲಿ ವಾಮಾಚಾರ..!! ಸ್ಥಳೀಯರಲ್ಲಿ ಆತಂಕ..!!!

Published

on

25ಕ್ಕೂ ಅಧಿಕ ತುಂಡರಿಸಿದ ಕೆಂಪು ಬಣ್ಣಕ್ಕೆ ತಿರುಗಿದ ಲಿಂಬೆಗಳು
10ಕ್ಕೂ ಅಧಿಕ ಕೊಳ್ತಿರಿಗಳು, ಸುತ್ತಲು ಸುರಿದ ಹೊದಲು,ಒಡೆದ ತೆಂಗಿನ ಕಾಯಿಗಳು

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಟಾರದ ದಾರಂದಕುಕ್ಕು, ಕಟಾರ, ಆನಡ್ಕ ಸೇರುವ ಮೂರು ರಸ್ತೆ ಮಧ್ಯೆಯಲ್ಲಿ 25ಕ್ಕೂ ಅಧಿಕ ತುಂಡರಿಸಿ ಕೆಂಪು ರಕ್ತ ಕೆಂಪು ಬಣ್ಣಕ್ಕೆ ತಿರುಗಿದ ಲಿಂಬೆಗಳು, 10ಕ್ಕೂ ಅಧಿಕ ಕೊಳ್ತಿರಿಗಳು, ಅದರ ಸುತ್ತಲು ಸುರಿದ ಹೊದಲು, ಒಡೆದ ತೆಂಗಿನ ಕಾಯಿಗಳು ಜ.18ರಂದು ಬೆಳಗ್ಗೆ ಬೆಳಕಿಗೆ ಬಂದಿದ್ದು ಇದೊಂದು ವಾಮಾಚಾರ ಪ್ರಯೋಗ ಎಂದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಬೆಳ್ಳಿಪ್ಪಾಡಿ ಗ್ರಾಮದ ಕಟಾರದ ಅರಣ್ಯಕ್ಕೆ ಸಂಬಂಧಿಸಿದ ಸರಕಾರಿ ಜಾಗದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ರಾತ್ರೋ ರಾತ್ರಿ ಯಾರೋ ಮೂರು ಮಾರ್ಗ ಸೇರುವಲ್ಲಿ ವಾಮಾಚಾರ ಮಾಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಬೆಳಗ್ಗೆ ಹಾಲಿನ ಡೈರಿಗೆ ಹೋಗುವವರಿಗೆ ದಾರಂದಕುಕ್ಕು, ಕಟಾರ ಮತ್ತು ಆನಡ್ಕ ಸೇರುವ ಮೂರು ಮಾರ್ಗದ ಮಧ್ಯೆ ಬಾಳೆ ಎಲೆಯಲ್ಲಿ 25ಕ್ಕೂ ಅಧಿಕ ತುಂಡರಿಸಿದ ಲಿಂಬೆಗಳು, ಕೊಳ್ತಿರಿಗಳು ಹಾಗು ಚೆಲ್ಲಿದ ಹೊದಲುಗಳು ಕಂಡಿವೆ. ಜೊತೆಗೆ ಮೂರು ರಸ್ತೆ ಸೇರುವಲ್ಲಿ ತೆಂಗಿನ ಕಾಯಿ ಒಡೆದಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಪರಿಸರದ ಜನರು ಸೇರಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement