Published
1 month agoon
By
Akkare News
ಪುತ್ತೂರು: ಜಾನಪದ ಕ್ರೀಡೆಯಾದ ಇತಿಹಾಸ ಪ್ರಸಿದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗಳಿಸಿರುವ 33ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳವು ಜ.24 ಮತ್ತು 25 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದ ಆಕರ್ಷಣೆಯಾಗಿ ಖ್ಯಾತ ಸಿನಿಮಾ ನಟ ನಟಿಯರು ಭಾಗವಹಿಸಲಿದ್ದಾರೆ.

ಸಿನಿಮಾ ನಟಿಯರಾದ ಪ್ರಿಯಾಂಕ ಉಪೇಂದ್ರ, ರಕ್ಷಿತಾ ಶೆಟ್ಟಿ, ನಟರಾದ ಆದಿತ್ಯ, ಶ್ರೇಯಾನ್ ಮಂಜು, ಶನಿಲ್ ಗುರು,ಜೆ.ಪಿ.
ತುಮಿನಾಡು,ಪ್ರಕಾಶ್ ತುಮಿನಾಡು, ಧರ್ಮ ಕೀರ್ತಿ ರಾಜ್ ಸಿನಿಮಾ ನಿರ್ದೇಶನ ರಾಜೇಂದ್ರ ಸಿಂಗ್ ಬಾಬು ಮೊದಲಾದ ಅನೇಕ ನಟ ನಟಿಯರು ಭಾಗವಹಿಸಿ ಮನರಂಜನೆ ನೀಡಲಿದ್ದಾರೆ.ಎಂದು ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ರವರು ತಿಳಿಸಿದ್ದಾರೆ.








