Connect with us

ಇತರ

ಕಾರವಾರ: ಅನೈತಿಕ ಸಂಬಂಧ ಆರೋಪ; ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್​ ಅರೆಸ್ಟ್ ಆಗಿದ್ಯಾಕೆ?

Published

on

ಕಾರವಾರ(ಫೆ.03): ಮಹಿಳೆಯ ಜೊತೆ ಖ್ಯಾತ ಜ್ಯೋತಿಷಿ ಕಮಲಾಕರ್​ ಭಟ್ ಅನೈತಿಕ ಸಂಬಂಧ (Illegal Relationship) ಹೊಂದಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಕೊಲೆ ಮಾಡಲು ಹೆಂಡ್ತಿ ಸ್ಕೆಚ್​​ ಹಾಕಿದ್ದಳಂತೆ. ಆದ್ರೆ ಹಂತಕರ ಪ್ಲಾನ್​​ ಜಸ್ಟ್ ಮಿಸ್​ ಆಗಿದೆ.
ದುರಾದೃಷ್ಟ ಎನ್ನುವಂತೆ ತಮ್ಮನನ್ನು ಪಾರು ಮಾಡಲು ಹೋದ ಅಣ್ಣನೇ ಕೊಲೆಯಾಗಿದ್ದಾನೆ. ಈ ಪ್ರಕರಣ ಸಂಬಂಧ ಖ್ಯಾತ ಜ್ಯೋತಿಷಿ ಕಮಲಾಕರ್​ ಭಟ್ (Kamalakar Bhatt) ಅವರನ್ನ ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ಜೊತೆ ಖ್ಯಾತ ಜ್ಯೋತಿಷಿ ಅಕ್ರಮ ಸಂಬಂಧ!?

ಖ್ಯಾತ ಜ್ಯೋತಿಷಿ ಕಮಲಾಕರ್​ ಭಟ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮಹೇಶ್ ನಾಯ್ಕ್ ಎಂಬುವವರ ಪತ್ನಿ ಸುಚಿತ್ರಾ ಎಂಬಾಕೆಯ ಜೊತೆ ಜ್ಯೋತಿಷಿ ಕಮಲಾಕರ್​ ಭಟ್ ಅನೈತಿಕ ಸಂಬಂಧ ಹೊಂದಿದ್ರು ಎನ್ನುವ ಆರೋಪ ಕೇಳಿ ಬಂದಿದೆ.

ಮಹೇಶ್ ನಾಯ್ಕ್ ಕೊಲೆ ಪ್ಲಾನ್​

ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಮಹೇಶ್ ನಾಯ್ಕ್ ನನ್ನು ಕೊಲೆ ಮಾಡಿಸಲು ಪತ್ನಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್​ ಭಟ್ ಸೇರಿದಂತೆ ಕೆಲವರು ಪ್ಲಾನ್ ಮಾಡಿದ್ದರಂತೆ. ಆದ್ರೆ ಈ ಹಂತಕರ ಕೊಲೆ ಪ್ಲಾನ್​​ನಲ್ಲಿ ಮಹೇಶ್ ನಾಯ್ಕ್ ಜಸ್ಟ್​ ಮಿಸ್​​ ಆಗಿದ್ದಾರೆ. ಆದ್ರೆ ಈತನ ಸಹೋದರ ವಸಂತ್ ನಾಯ್ಕ್ ಕೊಲೆಯಾಗಿದ್ದಾನೆ.

ತಮ್ಮನನ್ನ ಕಾಪಾಡಲು ಹೋಗಿ ಅಣ್ಣ ಸಾವು

ಸುಚಿತ್ರಾ ಕಳುಹಿಸಿದ್ದ ಗ್ಯಾಂಗ್​​ ಏಕಾಏಕಿ ಮಹೇಶ್ ನಾಯ್ಕ್ ಮೇಲೆ ಹಲ್ಲೆಗೆ ಮುಂದಾಗಿತ್ತು. ಈ ವಿಚಾರ ತಿಳಿದು ಸಹೋದರ ಮಹೇಶ್​ನನ್ನು ಕಾಪಾಡಲು ಅಣ್ಣ ವಸಂತ ನಾಯ್ಕ್ ಓಡೋಡಿ ಬಂದಿದ್ದರು. ಗಲಾಟೆಯಲ್ಲಿ ಮಹೇಶ್ ನಾಯ್ಕ್ ಬಜಾವ್ ಆಗಿದ್ದು, ಕಾಪಾಡಲು ಬಂದ ಅಣ್ಣ ವಸಂತ್​​ ನಾಯ್ಕ್ ಬರ್ಬರವಾಗಿ ಕೊಲೆಯಾಗಿದ್ದಾರೆ.

ಕಮಲಾಕರ ಭಟ್ ಸ್ವಾಮಿ ಅರೆಸ್ಟ್​

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಘಟನೆ ನಡೆದಿದ್ದು, 24 ಗಂಟೆಗಳಲ್ಲಿ ವಸಂತ್​​ ನಾಯ್ಕ್ ಕೊಲೆ ಸಂಬಂಧ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಸುಚಿತ್ರಾ, ಸುಚಿತ್ರಾಳ ತಂದೆ ಲೋಕನಾಥ್​, ಕಮಲಾಕರ ಸ್ವಾಮಿ ಭಟ್ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement