Connect with us

ಇತರ

ಪುತ್ತೂರಿನ ಬೇದ್ರಾಳ ನಿವಾಸಿ ಶ್ರೀ ಮನ್ವಿ ತ್ ಕುಮಾರ್ ಅವರು ರಾಷ್ಟ್ರಮಟ್ಟದ ಮೋಟಾರ್‌ಸ್ಪೋರ್ಟ್ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ವದ ಸೇವೆಗೆ ಆಂಧ್ರ ಪ್ರದೇಶ ಕ್ರೀಡಾ ಪ್ರಾಧಿಕಾರದಿಂದ (SAAP) ಅಧಿಕೃತ ಪ್ರಶಂಸಾ ಪತ್ರ

Published

on

ಪುತ್ತೂರು: 12.ಪುತ್ತೂರಿನ ಬೇದ್ರಾಳ ನಿವಾಸಿ ಶ್ರೀ ಮನ್ವಿ ತ್ ಕುಮಾರ್ ಅವರು ರಾಷ್ಟ್ರಮಟ್ಟದ ಮೋಟಾರ್‌ಸ್ಪೋರ್ಟ್ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ವದ ಸೇವೆಗೆ ಆಂಧ್ರ ಪ್ರದೇಶ ಕ್ರೀಡಾ ಪ್ರಾಧಿಕಾರದಿಂದ (SAAP) ಅಧಿಕೃತ ಪ್ರಶಂಸಾ ಪತ್ರ ಸ್ವೀಕರಿಸಿದ್ದಾರೆ.


ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ಸ್ ಆಫ್ ಇಂಡಿಯಾ (FMSCI) ಹಾಗೂ ಫೆಡರೇಶನ್ ಇಂಟರ್‌ನ್ಯಾಷನಲ್ ಡಿ ಮೋಟೋಸೈಕ್ಲಿಸಂ (FIM) ಸಂಸ್ಥೆಗಳ ಅಧಿಕೃತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮನ್ವಿತ್ ಕುಮಾರ್ ಅವರು, 2026ರ ಫೆಬ್ರವರಿ 7ರಂದು ವಿಶಾಖಪಟ್ಟಣದಲ್ಲಿ ಆಯೋಜಿಸಲಾದ FMSCI–MRF ರಾಷ್ಟ್ರೀಯ ಸೂಪರ್‌ಕ್ರಾಸ್ ಚಾಂಪಿಯನ್‌ಶಿಪ್ – ರೌಂಡ್ 5 ಸ್ಪರ್ಧೆಯ ಯಶಸ್ವಿ ಆಯೋಜನೆಗೆ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸೇವೆಯಿಂದ ಆಂಧ್ರ ಪ್ರದೇಶದಲ್ಲಿ ಮೋಟಾರ್‌ಸ್ಪೋರ್ಟ್ ಸಂಸ್ಕೃತಿಯ ವೃದ್ಧಿಗೆ ಉತ್ತೇಜನ ದೊರೆತಿದ್ದು, ರಾಜ್ಯವನ್ನು ರಾಷ್ಟ್ರೀಯ ಮಟ್ಟದ ಮೋಟಾರ್‌ಸ್ಪೋರ್ಟ್ ಚಟುವಟಿಕೆಗಳ ಹೊಸ ಕೇಂದ್ರವಾಗಿ ಗುರುತಿಸಲು ಸಹಕಾರವಾಗಿದೆ ಎಂದು ಪ್ರಶಂಸಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಈ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಕ್ರೀಡಾ ಪ್ರಾಧಿಕಾರದ ನಿರ್ದೇಶಕರಾದ ಎಂ. ದುರ್ಗಾ ರಮೇಶ್ ಕುಮಾರ್ ಅವರು ಮನ್ವಿತ್ ಕುಮಾರ್ ಅವರ ಅಮೂಲ್ಯ ಸೇವೆ, ಸಮರ್ಪಣೆ ಮತ್ತು ಮೋಟಾರ್‌ಸ್ಪೋರ್ಟ್ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನಮ್ಮ ಪುತ್ತೂರಿನ ಯುವಕನೊಬ್ಬ ರಾಷ್ಟ್ರಮಟ್ಟದ ಕ್ರೀಡಾಕ್ಷೇತ್ರದಲ್ಲಿ ಈ ರೀತಿಯ ಗೌರವಕ್ಕೆ ಪಾತ್ರರಾಗಿರುವುದು ಊರಿಗೆ ಹೆಮ್ಮೆ ತಂದಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement