Connect with us

ಇತರ

ಈ ಛಲವಾದಿ ನಾರಾಯಣ ಸ್ವಾಮಿ ನಾಯಿ ಥರ.. ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ – ಅಶೋಕ್ ಕುಮಾರ್ ರೈ

Published

on

ಪುತ್ತೂರು ಫೆಬ್ರವರಿ 15: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣ ಸ್ವಾಮಿ ನೀಡಿದ ಹೇಳಿಕೆಗೆ ಇದೀಗ ಪುತ್ತೂರು ಶಾಸಕ ಅಶೋಕ್ ರೈ ತಿರುಗೇಟು ನೀಡಿದ್ದು, ಈ ಛಲವಾದಿ ನಾರಾಯಣ ಸ್ವಾಮಿ ನಾಯಿ ಥರ.. ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ ಎಂದು ಹೇಳಿದ್ದಾರೆ.

ಪುತ್ತೂರಿನಲ್ಲಿ ಮಾತನಾಡಿದ ಅವರು ಛಲವಾದಿ ನಾರಾಯಣ ಸ್ವಾಮಿ ನಾಯಿ ಥರ ನಾಯಿಗೆ ಯಾರು ಒಳ್ಳೇರು, ಯಾರು ಕೆಟ್ಟವರು ಎಂದು ಗೊತ್ತಾಗುದಿಲ್ಲ, ಅದು ಯಾರು ಬಂದರೂ ಬೊಗಳುತ್ತದೆ. ಛಲವಾದಿ ಕೂಡಾ ನಾಯಿನ ತರಹ, ಅವನಿಗೆ ಏನು ಎಂತ ಎಂದು‌ ಗೊತ್ತಾಗೋದಿಲ್ಲ. ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ, ಪ್ರಾಣಿ ಅಲ್ವಾ ಎಂದಿದ್ದಾರೆ.

ಛಲವಾದಿ ಒಬ್ಬ ನರಸಣ್ಣನ ತರಹ ಪುಂಗಿ ಊದಿಕೊಂಡು ಬರುತ್ತಾರಲ್ಲಾ, ಪಾಪ ಅವರಿಗಾದರೂ ಸ್ವಲ್ಪ ಬುದ್ದಿ ಇದೆ, ಇವನಿಗೆ ಬುದ್ಧಿ ಇಲ್ಲ, ಅವನನ್ನು ಬಿಜೆಪಿಯವರು ಯಾಕೆ ಕರೆಯುತ್ತಾರೋ ಗೊತ್ತಿಲ್ಲ. ಅವ ಛಲವಾದಿ ನಾರಾಯಣ ಸ್ವಾಮಿಯಲ್ಲ, ಅವ ಛಲವಾದಿ ನಾಲಾಯಕ್ ಸ್ವಾಮಿ ಎಂದು ವ್ಯಂಗ್ಯವಾಡಿದ್ದಾರೆ.

ನಾನು ನನ್ನ ಬಿಜೆಪಿ ಬಂಧುಗಳ ಹತ್ರ ವಿನಂತಿ ಮಾಡುತ್ತೇನೆ. ಇಂತವರೆಲ್ಲಾ ಮೇಲಿನಿಂದ ಬಂದ ಏನೆಲ್ಲಾ ಬೊಗಳಿ ಹೋಗುತ್ತದೆ. ಯಾರಿಗೆ ಎಷ್ಟು ವರ್ಷ ಅಧಿಕಾರ ಇರುತ್ತದೆ, ಯಾರು ಎಂಎಲ್ಎ,ಮಂತ್ರಿ ಆಗುತ್ತಾರಾ ಗೊತ್ತಿಲ್ಲ, ಅದೆಲ್ಲಾ ಪರ್ಮನೆಂಟ್ ಕೂಡಾ ಅಲ್ಲ, ಇಂತರನ್ನೆಲ್ಲಾ ಕರೆತಂದು ನಮ್ಮ ಬಾಂಧವ್ಯವನ್ನು ಯಾಕೆ ಹಾಳು ಮಾಡೋದು, ಅನುದಾನದ ವಿಚಾರದಲ್ಲಿ ಯಾವುದೇ ಛಾಲೆಂಜಿಗೂ ನಾನು ರೆಡಿ, ಅವರು ಕರೆದಲ್ಲಿ ನಾನು ಹೋಗೋದಿಲ್ಲ, ನಾನು ಶಾಸಕ, ನಾನು ಕರೆದಲ್ಲಿ ಅವರು ಬರಲಿ, ಉತ್ತರ ಕೊಡುವ ಕೆಲಸ ಮಾಡುತ್ತೇನೆ ಎಂದರು.

ನಾನು ಯಾರ ತಂಟೆಗೂ ಹೋಗೋದಿಲ್ಲ, ನಮ ತಂಟೆಗೆ ಬಂದರೆ ನಾವು ಉತ್ತರ ಕೊಡುತ್ತೇವೆ , ನನ್ನ ಒಂದೇ ಒಂದು ಉದ್ಧೇಶ ಪುತ್ತೂರಿನ ಅಭಿವೃದ್ಧಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement