Published
3 weeks agoon
By
Akkare News
ಪುತ್ತೂರು ಫೆಬ್ರವರಿ 16: ಪುತ್ತೂರು ಮಹಿಳಾ ಕಾಲೇಜಿನಲ್ಲಿ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿನಿಯರು ರಸ್ತೆ ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಿದರು.

ಪುತ್ತೂರು ನಗರದ ಮಧ್ಯೆ ಇರುವ ಮಹಿಳಾ ಕಾಲೇಜು ಇದಾಗಿದ್ದು, ಹೊಸ ಕಟ್ಟಡ ನಿರ್ಮಾಣವಾಗುತ್ತದೆ ಎಂದು ಹೇಳಿ ಪ್ರತಿವರ್ಷ ಹೇಳುತ್ತಾ ಇದ್ದರೂ ಇನ್ನೂ ಕಟ್ಟಡ ಕಾಮಗಾರಿ ಆಗಿಲ್ಲ. ಅಲ್ಲದೆ ವಿಧ್ಯಾರ್ಥಿನಿಯರಿಗೆ ಸರಿಯಾದ ತರಗತಿ ಇಲ್ಲದೆ ಪಾಠ ಕೇಳಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಪಕ್ಕದಲ್ಲೆ ಇರುವ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಿಂದಾಗಿ ಕಾಲೇಜಿನ ಸುತ್ತಮುತ್ತ ವಾಸನೆ ಹರಡುತ್ತಿದೆ ಎಂದು ವಿಧ್ಯಾರ್ಥಿನಿಯರು ಆರೋಪಿಸಿದ್ದಾರೆ.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪುತ್ತೂರು ಶಾಸಕ ಅಶೋಕ್ ರೈ ಪ್ರತಿಭಟನೆ ಮಾಡಲು ಅವಕಾಶ ನೀಡಿದ ಕಾಲೇಜು ಉಪನ್ಯಾಸಕರ ಜೊತೆಗೆ ವಾಗ್ವಾದ ನಡೆಸಿದರು. ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಅಶೋಕ್ ಕುಮಾರ್ ರೈ , ಕಾಲೇಜಿನ ಸಮಸ್ಯೆಗಳನ್ನು ನನ್ನ ಗಮನಕ್ಕೆ ಯಾಕೆ ತಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ವಿದ್ಯಾರ್ಥಿನಿಗಳ ಎದುರೇ ಶಾಸಕರಿಗೆ ಸಮಸ್ಯೆಯ ಬಗ್ಗೆ ಹಲವು ಬಾರಿ ಮನವಿ ಮಾಡಲಾಗಿದೆ ಎಂದರು. ಬಳಿಕ ಮಾತನಾಡಿದ ಶಾಸಕ ಅಶೋಕ್ ರೈ ತರಗತಿಗೆ ದೂಳು ಬರದಂತೆ ರಾತ್ರಿ ವೇಳೆ ಕಾಮಗಾರಿ ನಡೆಸಲು ತಿಳಿಸುತ್ತೆನೆ ಎಂದರು.









