Published
3 weeks agoon
By
Akkare News
ಉಪ್ಪಿನಂಗಡಿ: ನದಿ ನೀರಿನ ಶುದ್ಧತೆಗಾಗಿ ನದಿಗಳಲ್ಲಿ ಮೀನುಗಳ ಸಂತತಿಯನ್ನು ವೃದ್ಧಿಸುವ ಕಾರ್ಯವಾಗಬೇಕು. ಈ ಮೂಲಕ ಪ್ರಕೃತಿಯ ಸಮತೋಲನ ಕಾಪಾಡಬೇಕಾಬೇಕಾಗಿದೆ. ಆದ್ದರಿಂದ ಇನ್ನು ಮುಂದೆ ರಾಸಾಯನಿಕ ಅಥವಾ ಸಿಡಿಮದ್ದು ಬಳಸಿ ಮೀನುಗಳನ್ನು ಹಿಡಿಯುವವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಎಚ್ಚರಿಸಿದರು.

ಮೀನುಗಾರಿಕಾ ಇಲಾಖೆಯ ವತಿಯಿಂದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನ್ಯಾಕ್ ಅವರ 34 ನೆಕ್ಕಿಲಾಡಿಯಲ್ಲಿರುವ ಜಾಗದ ಬಳಿ ಕುಮಾರಧಾರ ನದಿಗೆ ಐದು ಲಕ್ಷ ಗೌರಿ (ಕಾಮನ್ ಕಾರ್ಪ್) ಮೀನಿನ ಮರಿಗಳನ್ನು ಬಿಟ್ಟು ಅವರು ಮಾತನಾಡಿದರು.ನದಿ, ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೂ ಕಾಪಿಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೆಲವು ಮೀನು ಹಿಡಿಯುವವರು ರಸಾಯನಿಕ ಹಾಗೂ ಸಿಡಿಮದ್ದು (ತೋಟೆ) ಬಳಸಿ ಮೀನನ್ನು ಹಿಡಿಯುವುದು ಗಮನಕ್ಕೆ ಬಂದಿದೆ. ಇದರಿಂದ ಸಣ್ಣ ಮೀನುಗಳು ನಾಶವಾಗುತ್ತದೆ. ಸಾರ್ವಜನಿಕ ಜಾಗದಲ್ಲಿರುವ ಮಾವಿನ ಮರಗಳ ಮಾವಿನ ಮಿಡಿಗಳನ್ನು ಕೊಯ್ಯುವುದನ್ನು ಹೇಗೆ ನಿರ್ಬಂಧಿಸಲಾಗಿದೆಯೋ ಅದೇ ರೀತಿ ರಸಾಯನಿಕ ಹಾಗೂ ಸಿಡಿಮದ್ದು ಬಳಸಿ ಮೀನಿನ ಸಂತತಿ ನಾಶ ಮಾಡುವವರ ಮೇಲೆಯೂ ಇನ್ನು ಮುಂದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪ್ರತಿ ಗ್ರಾ.ಪಂ.ಗೆ ಸೂಚನೆ ನೀಡಲಾಗುವುದು. ಇಲ್ಲಿ ಈ ಬಾರಿ ಐದು ಲಕ್ಷ ಮೀನಿನ ಮರಿಗಳನ್ನು ಬಿಡಲಾಗಿದ್ದು, ಎರಡು ವರ್ಷಕ್ಕೆ ಇದರ ಸಂಖ್ಯೆ 25 ಲಕ್ಷವಾಗಬೇಕು.


ಇಲ್ಲಿ ಮೀನಿನ ಮರಿಗಳನ್ನು ಬಿಡಲು 34 ನೆಕ್ಕಿಲಾಡಿ ಗ್ರಾ.ಪಂ. ಕೂಡಾ ಮನವಿ ನೀಡಿದ್ದು, ಅವರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರಲ್ಲದೆ, ಮುಂದಿನ ವರ್ಷದಿಂದ ನದಿಗಳು ಹಾದು ಹೋಗುವ ಪ್ರತಿ ಗ್ರಾ.ಪಂ.ನಲ್ಲಿಯೂ ನದಿಗೆ ಮೀನುಗಳನ್ನು ಬಿಡುವ ಕಾರ್ಯ ಮಾಡಲಾಗುವುದು ಎಂದರು.
ಈ ಸಂದರ್ಭ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನ್ಯಾಕ್, ಕರ್ನಾಟಕ ರಾಜ್ಯ ರೈತ ಸಂಘ(ಹಸಿರು ಸೇನೆ)ದ ದ.ಕ. ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ತೌಸೀಫ್ ಯು.ಟಿ., ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ನ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಕಾಂಗ್ರೆಸ್ ಉಸ್ತುವಾರಿಗಳಾದ ವಿಕ್ರಂ ಶೆಟ್ಟಿ ಅಂತರ, ಗಣೇಶ್ರಾಜ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ವೆಂಕಪ್ಪ ಪೂಜಾರಿ, 34 ನೆಕ್ಕಿಲಾಡಿ ಗ್ರಾ.ಪಂ.ನ ನಿಕಟಪೂರ್ವಾಧ್ಯಕ್ಷೆ ಸುಜಾತ ರೈ ಅಲಿಮಾರ್, ಪ್ರಮುಖರಾದ ಉದಯಕುಮಾರ್ ಉದಯಗಿರಿ, ಅಸ್ಕರ್ ಅಲಿ, ಜತೀಂದ್ರ ಶೆಟ್ಟಿ, ಹಮೀದ್ ಪಿ.ಟಿ., ಜೆರಾಲ್ಡ್ ಮಸ್ಕರೇನಸ್, ಶಬೀರ್ ಅಹಮ್ಮದ್, ಇಸಾಕ್, ಖಾದರ್ ಆದರ್ಶನಗರ, ಉಲ್ಲಾಸ್, ಕೃಷ್ಣಪ್ಪ, ಆನಂದ ಸಾಂತ್ಯಡ್ಕ, ಫೈಝಲ್, ಪುತ್ತೂರು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ, ಮಂಗಳೂರು ಮೀನುಗಾರಿಕಾ ಇಲಾಖೆಯ ಮೇಲ್ವಿಚಾರಕರಾದ ಜಯಂತ ಕುಮಾರ್, ಭೀಮೇಶ್, ೩೪ ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಲೆಕ್ಕ ಸಹಾಯಕ ದೇವಪ್ಪ ನಾಯ್ಕ, ಸಿಬ್ಬಂದಿ ಸಚಿನ್ ಇದ್ದರು.







