Published
3 weeks agoon
By
Akkare News
ಕಡಬ: ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ವಿಡಿಯೋ ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ‘ಸಂಚಾರಿ ಸ್ಟುಡಿಯೋ’ ಯೂಟ್ಯೂಬ್ ಚಾನೆಲ್ ಖ್ಯಾತಿಯ ಸಂತೋಷ್ ಕಡಬ ಅವರನ್ನು ಬೆಂಗಳೂರು ಪೊಲೀಸರು ಬುಧವಾರ (ಫೆ. 18) ವಶಕ್ಕೆ ಪಡೆದಿದ್ದಾರೆ.ಕೋರ್ಟ್ ಆದೇಶ ಉಲ್ಲಂಘನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಸಂತೋಷ್ ಕಡಬನಿಗೆ 30 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮತ್ತು ಕೋರ್ಟ್ ಸಿಬ್ಬಂದಿ ಇಂದು ಕಡಬಕ್ಕೆ ಆಗಮಿಸಿ, ಆತನ ಅಂಗಡಿಯಲ್ಲಿದ್ದಾಗಲೇ ವಶಕ್ಕೆ ಪಡೆದಿದ್ದಾರೆ.

ಬಂಧಿತ ಸಂತೋಷ್‌ನನ್ನು ಸಂಜೆ ವೇಳೆಗೆ ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ಅಲ್ಲಿಂದ ನೇರವಾಗಿ ಜೈಲಿಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.










