Connect with us

ಇತರ

ಮಹಿಳೆಯರಿಗೆ ಸಮಾನ ಅವಕಾಶ: ದೇಶಾದ್ಯಂತ ‘ಏಕರೂಪ ನಾಗರಿಕ ಸಂಹಿತೆ’ ಜಾರಿಗೆ ಸುಪ್ರೀಂ ಅಸ್ತು!

Published

on

ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಪರ ಸುಪ್ರೀಂಕೋರ್ಟ್ ಬ್ಯಾಟ್ ಬೀಸಿದೆ. ದೇಶದ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ಏಕೈಕ ಮಾರ್ಗವೆಂದರೆ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೆ ತರುವುದು ಎಂದು ಅತ್ಯುನ್ನತ ನ್ಯಾಯಾಲಯ ಮಂಗಳವಾರ ಹೇಳಿದೆ.

ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅಡಿಯಲ್ಲಿ ಮಹಿಳೆಯರ ಹಕ್ಕುಗಳ ಉಲ್ಲಂಘನೆಯನ್ನು ಆರೋಪಿಸಿ ಒಂದು ಬ್ಯಾಚ್ ಅರ್ಜಿಯ ವಿಚಾರಣೆ ನಡೆಸುತ್ತಿರುವ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಆರ್ ಮಹದೇವನ್ ಮತ್ತು ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.

“ಮುಸ್ಲಿಂ ಸಮಾಜದ ಒಂದು ದೊಡ್ಡ ವರ್ಗವು ಸಮಾನ ಉತ್ತರಾಧಿಕಾರದ ಹಕ್ಕುಗಳಿಂದ ವಂಚಿತವಾಗಿದೆ ಎಂಬುದು ನಿಜ. ಆದರೆ ಶರಿಯಾ ಕಾನೂನಿನ ಉತ್ತರಾಧಿಕಾರದ ನಿಬಂಧನೆಯನ್ನು ತೆಗೆದುಹಾಕಿದರೆ, ನಂತರ ಯಾವ ಕಾನೂನು ಉತ್ತರಾಧಿಕಾರವನ್ನು ನಿಯಂತ್ರಿಸಬೇಕು? ಏಕರೂಪ ನಾಗರಿಕ ಸಂಹಿತೆ ಸರಿಯಾದ ಉತ್ತರವಾಗಿದೆ. ದೇಶದ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಇರುವ ಒಂದೇ ಮಾರ್ಗವೆಂದರೆ ಭಾರತದಾದ್ಯಂತ ಏಕರೂಪ ಸಂಹಿತೆ ಜಾರಿಗೆ ತರುವುದು ಎಂದು ಹೇಳಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಪ್ರಶಾಂತ್ ಭೂಷಣ್, ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಸಂವಿಧಾನದ 25 ನೇ ವಿಧಿಯಡಿ ಉತ್ತರಾಧಿಕಾರಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನನ್ನು ರಕ್ಷಿಸಲಾಗುವುದಿಲ್ಲ. ಉತ್ತರಾಧಿಕಾರವು ನಾಗರಿಕ ಹಕ್ಕು ಮತ್ತು ಅಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಲಾಗದು. ಶಾಯರಾ ಬಾನೋ ತೀರ್ಪಿನ ನಂತರ ದೇಶದಲ್ಲಿ ಈಗ ಆ ಪರಿಸ್ಥಿತಿ ಹೊಂದಲು ಸಾಧ್ಯವಿಲ್ಲ.ಮುಸ್ಲಿಂ ಮಹಿಳೆಯರಿಗೆ ಮುಸ್ಲಿಂ ಪುರುಷರಿಗೆ ಇರುವಂತೆ ಸಮಾನವಾದ ಹಕ್ಕುಗಳು ಇರುವುದಿಲ್ಲ ಎಂದು ಹೇಳಿದರು.

ಆದಾಗ್ಯೂ, ಆದಿವಾಸಿಗಳು ಸೇರಿದಂತೆ ವಿವಿಧ ಸಮಾಜಗಳಲ್ಲಿ ಹಲವಾರು ಅಸಮತೋಲನಗಳಿವೆ ಎಂಬುದನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿತು. ಸುಪ್ರೀಂಕೋರ್ಟ್ ನಿಂದ ಇವುಗಳನ್ನು ತೆಗೆದುಹಾಕಬಹುದೇ? ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ವಿಚಾರಣೆಯ ಸಂದರ್ಭದಲ್ಲಿ, ‘ಒಬ್ಬ ಪುರುಷನಿಗೆ ಒಬ್ಬ ಹೆಂಡತಿ’ ಎಂಬ ನಿಯಮವನ್ನು ಎಲ್ಲಾ ಸಮುದಾಯಗಳು ಏಕರೂಪವಾಗಿ ಅನುಸರಿಸುತ್ತಿಲ್ಲ ಎಂಬುದನ್ನು ನ್ಯಾಯಾಲಯ ಪರಿಗಣಿಸಿತು.

ಆದರೆ ಎಲ್ಲಾ ದ್ವಿಪತ್ನಿ ವಿವಾಹಗಳನ್ನು ಅಸಾಂವಿಧಾನಿಕವೆಂದು ನ್ಯಾಯಾಲಯ ಘೋಷಿಸಬಹುದೇ? ಎಂಬುದು ಇದರ ಅರ್ಥ ಅಲ್ಲ. ಆದ್ದರಿಂದ ನಿರ್ದೇಶನ ತತ್ವಗಳನ್ನು ಜಾರಿಗೆ ತರಲು ನಾವು ಶಾಸಕಾಂಗಕ್ಕೆ ಅಧಿಕಾರವನ್ನು ನೀಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು. ಏಕರೂಪ ನಾಗರಿಕ ಸಂಹಿತೆ ಜಾರಿಗೆ ನ್ಯಾಯಾಲಯ ಈಗಾಗಲೇ ಶಾಸಕಾಂಗಕ್ಕೆ ಶಿಫಾರಸು ಮಾಡಿದೆ ಎಂದು ಅವರು ಹೇಳಿದರು.

ಮುಸ್ಲಿಂ ಮಹಿಳೆಯರೇ ಸಲ್ಲಿಸಿರುವ ಅರ್ಜಿಯಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡುವುದು ಸೂಕ್ತ ಎಂದು ಪೀಠ ಹೇಳಿತು. ಇದಕ್ಕೆ ಉತ್ತರಿಸಿದ ಭೂಷಣ್, ಅರ್ಜಿದಾರರಲ್ಲಿ ಕೆಲವರು ಮುಸ್ಲಿಂ ಮಹಿಳೆಯರಿದ್ದಾರೆ ಎಂದರು.

ವಾದಗಳನ್ನು ಆಲಿಸಿದ ನ್ಯಾಯಾಲಯವು, ಶರಿಯತ್ ಉತ್ತರಾಧಿಕಾರದ ನಿಬಂಧನೆಗಳನ್ನು ರದ್ದುಗೊಳಿಸಿದರೆ ಪರಿಹಾರಗಳೇನು ಎಂಬ ಸಲಹೆಗಳನ್ನು ಸೇರಿಸಲು ಅರ್ಜಿಯನ್ನು ತಿದ್ದುಪಡಿ ಮಾಡಲು ಸೂಚಿಸಿತು. ಭೂಷಣ್ ಅವರು ಅರ್ಜಿಯನ್ನು ತಿದ್ದುಪಡಿ ಮಾಡಲು ಒಪ್ಪಿದ ನಂತರ ಪೀಠವು ಮುಂದಿನ ವಿಚಾರಣೆಯನ್ನು ಮತ್ತೊಂದು ದಿನಾಂಕಕ್ಕೆ ಮುಂದೂಡಿತು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement