Published
4 weeks agoon
By
Akkare News
ಪುತ್ತೂರು:ಸಾವಿರಾರು ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ನೈತಾಡಿ ಬಂಗೇರ ಕುಟುಂಬಸ್ಥರ ಸಾವಿರದ ಒಂದು ದೈವಗಳ ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವ ಕಾರ್ಯಕ್ರಮ ಮಾ.25 ರಿಂದ 28ರ ವರೆಗೆ ವಿಜ್ರಂಭಣೆಯಿಂದ ಜರಗಲಿದ್ದು, ಮಾ.25 ರಂದು ಬೆಳಿಗ್ಗೆ ಗಣಹೋಮ, ನಾಗತಂಬಿಲ, ಮುಡಿಪುಶುದ್ಧ ಕಾರ್ಯಕ್ರಮ ನಡೆಯಿತು.


ರಾತ್ರಿ ಉಳ್ಳಾಕುಲು ದೈವದ ಭಂಡಾರ ತೆಗೆಯುವುದು, ಜಾಗದ ಕಲ್ಲುರ್ಟಿ ನೇಮ ನಡೆಯಲಿದ್ದು, ಮಾ.26 ರಂದು ಬೆಳಿಗ್ಗೆ ಉಳ್ಳಾಕುಲು ದೈವದ ನೇಮೋತ್ಸವ, ಮಧ್ಯಾಹ್ನ ಅನ್ನಪ್ರಸಾದ, ಸಂಜೆ ರಕ್ತೇಶ್ವರಿ, ಪಿಲಿಚಾಮುಂಡಿ ಧರ್ಮದೈವ ವರ್ಣರ ಪಂಜುರ್ಲಿ, ಜಾವತೆ ದೈವಗಳ ಭಂಡಾರ ತೆಗೆದು ನೇಮೋತ್ಸವ, ಮಾ.27 ರಂದು ಕಲ್ಕುಡ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತಿ, ಮಾ.28 ರಂದು ಬೆಳಿಗ್ಗೆ ಶಿರಾಡಿ ದೈವದ ನೇಮೋತ್ಸವ ಮತ್ತು ಗುಳಿಗ ದೈವದ ನೇಮ, ಕೊರಗಜ್ಜ ದೈವಗಳ ನೇಮೋತ್ಸವ ನಡೆಯಲಿರುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.







