Published
3 weeks agoon
By
Akkare News

ಗುಡ್ ಫ್ರೈಡೆ ವಾರಾಂತ್ಯದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು, ನೈರುತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ಕೇರಳದ ಕರಾವಳಿ ನಗರಿ ಕಣ್ಣೂರು ನಡುವೆ ಮಂಗಳೂರು ಜಂಕ್ಷನ್ ಮಾರ್ಗವಾಗಿ ಒಂದು ಟ್ರಿಪ್ ವಿಶೇಷ ರೈಲನ್ನು ಕಾರ್ಯಾಚರಣೆಗೊಳಿಸಲಿದೆ.


ಈ ವಿಶೇಷ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟವಾಳ, ಮಂಗಳೂರು ಜಂಕ್ಷನ್, ಕಾಸರಗೋಡು, ಕಾಂಜನಗಾಡ್ ಮತ್ತು ಪಯ್ಯನ್ನೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಕುಕ್ಕೆ ಸುಬ್ರಮಣ್ಯಕ್ಕೆ ತೆರಳುವ ಪ್ರಯಾಣಿಕರಿಗೆ ಈ ರೈಲು ಅನುಕೂಲವಾಗಲಿದೆ. ಬೆಂಗಳೂರಿನಿಂದ ಗುರುವಾರ ಮಧ್ಯಾಹ್ನ ಹೊರಟು ಸಂಜೆ 7 ಗಂಟೆಗೆ ಸುಬ್ರಹ್ಮಣ್ಯ ರಸ್ತೆ ತಲುಪಲಿದೆ. ಮರುದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸುಬ್ರಹ್ಮಣ್ಯರಸ್ತೆಯಿಂದ ಬೆಂಗಳೂರಿನ ಕಡೆ ಹೊರಡಲಿದೆ.
ಈ ರೈಲು ಒಟ್ಟು 21 ಬೋಗಿಗಳನ್ನು ಹೊಂದಿರಲಿದ್ದು, ಅವುಗಳಲ್ಲಿ 2 ಎಸಿ ಟು-ಟಯರ್, 6 ಎಸಿ ತ್ರೀ-ಟಯರ್, 7 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಲಗೇಜ್ ಕಮ್ ಜನರೇಟರ್ ಕಾರ್ ಮತ್ತು ಬ್ರೇಕ್ ವ್ಯಾನ್ಗಳು ಇರಲಿವೆ.
ಯಶವಂತಪುರ ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್ ರೈಲು ಏ. 3ರಂದು ರಾತ್ರಿ 10.45ಕ್ಕೆ ಯಶವಂತ ಪುರದಿಂದ ಹೊರಟು, ಏ.4ರಂದು ಬೆಳಗ್ಗೆ 5ಕ್ಕೆ ತಾಳಗುಪ್ಪ ತಲುಪಲಿದೆ. ವಾಪಸ್ಸಾಗುವ ವೇಳೆ ರೈಲು ಏ.4ರಂದು ಬೆಳಗ್ಗೆ 9.30ಕ್ಕೆ ತಾಳಗುಪ್ಪದಿಂದ ಹೊರಟು, ಸಂಜೆ 5.15ಕ್ಕೆ ಯಶವಂತಪುರ ಸೇರಲಿದೆ.



