Connect with us

ಸ್ಥಳೀಯ

ಇಂದು (ಎ.6)’ಪೈನ್ ಕಿಲ್ಲರ್ ತ್ಯಜಿಸಿ -ಕಿಡ್ನಿ ರಕ್ಷಿಸಿ-ಜೀವ ಉಳಿಸಿ’ ಆಂದೋಲನ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಜಾಥಾ

Published

on

ಎಪ್ರಿಲ್ 6 ಸೋಮವಾರದಂದು ಸಂಜೆ 3:30 ಗಂಟೆಗೆ ಸರಿಯಾಗಿ ದರ್ಬೆ ಸರ್ಕಲ್ ಬಳಿಯಿಂದ ಬೊಳ್ವಾರ್ ವರೆಗೆ ಪುತ್ತೂರಿನ ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ “ಪೈನ್ ಕಿಲ್ಲರ್ ತ್ಯಜಿಸಿ-ಕಿಡ್ನಿ ರಕ್ಷಿಸಿ-ಜೀವ ಉಳಿಸಿ”
ಎಂಬ ಜನಜಾಗೃತಿ ಕಾರ್ಯಕ್ರಮ ಶಾಲಾ ಮಕ್ಕಳ ಜಾಥಾದೊಂದಿಗೆ ನಡೆಯಲಿದೆ.

 

ರಾಜ್ಯದಲ್ಲಿ, ಅದರಲ್ಲೂ ಪುತ್ತೂರಿನಲ್ಲಿ ಕಿಡ್ನಿರೋಗಿಗಳ ಸಂಖ್ಯೆ ಹೆಚ್ಚುತಿರುವುದಕ್ಕೆ ಶಾಸಕ ಅಶೋಕ್ ರೈ ಅವರು ಕಾರಣ ಹುಡುಕಿದಾಗ ಪೈನ್ ಕಿಲ್ಲರ್ ಔಷಧಿಗಳು ಎಂಬುದು ಮನವರಿಕೆಯಾಗಿದೆ. ಹಾಗಾಗಿ ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸುವುದು ದೇಹಕ್ಕೆ ಹಾನಿಕಾರ ಎಂಬ ವಿಷಯದ ಬಗ್ಗೆ ಜನರಿಗೆ ತಿಳಿಸಲು ಮತ್ತು ವೈದ್ಯರ ಚೀಟು ಇಲ್ಲದೆ ಔಷಧಿಗಳನ್ನು ಕೊಡುವುದನ್ನು ನಿಷೇಧಿಸಬೇಕೆಂದು ಮೆಡಿಕಲ್ ನವರಿಗೆ ಮನವಿ ಮಾಡುವ ಮೂಲಕ ಜನಸಾಮಾನ್ಯರ ಜೀವ ರಕ್ಷಣೆಯ ಮಾಹಿತಿ ಮುಟ್ಟಿಸುವ ಸಲುವಾಗಿ ಕಾರ್ಯಕ್ರಮವನ್ನು ಶಾಸಕರು ರೂಪಿಸಿಕೊಂಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement