Published
2 hours agoon
By
Akkare News
ಮಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಎಂಆರ್ಪಿಎಲ್ ಕಂಪನಿಯು ನಾಲ್ಕನೇ ತ್ರೈಮಾಸಿಕದಲ್ಲಿ ₹119 ಕೋಟಿ ನಿವ್ವಳ ಲಾಭ ಗಳಿಸಿದೆ. ಶುಕ್ರವಾರ ನಡೆದ ಕಂಪನಿಯ 274ನೇ ಸಭೆಯಲ್ಲಿ ನಾಲ್ಕನೇ ತ್ರೈಮಾಸಿಕ ಹಾಗೂ 2025-26 ನೇ ಸಾಲಿನ ವಾರ್ಷಿಕ ಫಲಿತಾಂಶಗಳನ್ನು ಅನುಮೋದಿಸಲಾಯಿತು.

ಹಿಂದಿನ ಅವಧಿಯಲ್ಲಿ ₹363 ಕೋಟಿ ಗಳಿಸಿತ್ತು. ಒಟ್ಟು ಲಾಭವು ಹಿಂದಿನ ಸಾಲಿನ ₹584 ಕೋಟಿಗೆ ಹೋಲಿಸಿದರೆ ಈ ಬಾರಿ ₹1,235 ಕೋಟಿ ಏರಿಕೆಯಾಗಿದೆ. ನಿರ್ವಹಣಾ ಆದಾಯ ₹27,602 ಕೋಟಿ ಇದ್ದದ್ದು ₹28,493 ಕೋಟಿಗೆ ಏರಿಕೆಯಾಗಿದೆ.

ವಾರ್ಷಿಕ ಲೆಕ್ಕಾಚಾರದಲ್ಲಿ ₹1,09,280 ಕೋಟಿಯಿಂದ ಆದಾಯ ₹1,05,155 ಕೋಟಿಗೆ ಇಳಿಕೆ ಕಂಡಿದೆ. ಒಟ್ಟು ನಿವ್ವಳ ಆದಾಯ ಹಿಂದಿನ ಸಾಲಿನಲ್ಲಿ ₹51 ಕೋಟಿ ಇದ್ದರೆ ಈ ಬಾರಿ ₹1,931 ಕೋಟಿಗೆ ಏರಿಕೆಯಾಗಿದೆ. ಒಟ್ಟು ಲಾಭ ಹಿಂದಿನ ಸಾಲಿನ ₹113 ಕೋಟಿಯಿಂದ ₹4,022 ಕೋಟಿಗೆ ಏರಿಕೆಯಾಗಿದೆ.

‘





