Connect with us

ಇತರ

೯/೧೧ ಖಾತಾ ಸಮಸ್ಯೆ ನಿವಾರಣೆಯಾಗಿದೆ: ತೊಂದರೆಗಳಾದಲ್ಲಿ ಕಚೇರಿಯನ್ನು ಸಂಪರ್ಕಿಸಿ; ಶಾಸಕ ಅಶೋಕ್ ರೈ

Published

on

ಪುತ್ತೂರು: ಈಗ ಯಾವುದೇ ಗ್ರಾಪಂಗಳಲ್ಲಿ ೯/೧೧ ಖಾತಾ ಮಾಡಿಸಿಕೊಳ್ಳುವಲ್ಲಿ ಯಾವುದೇ ಸಮಸ್ಯೆ ಇಲ್ಲ ಎಲ್ಲವೂ ಪರಿಹರಿಸಲಾಗಿದೆ, ಆದರೂ ಕೆಲವು ಗ್ರಾಪಂಗಳಲ್ಲಿ ಪಿಡಿಒಗಳು ಸೈಟ್ ಓಪನ್ ಆಗುತ್ತಿಲ್ಲ ಎಂಬ ವಿಚಾರವನ್ನು ಜನರಿಗೆ ಹೇಳುತ್ತಿದ್ದಾರೆ. ಹಾಗೇನಾದರೂ ಹೇಳಿದ್ದಲ್ಲಿ ತಕ್ಷಣ ಶಾಸಕರ ಕಚೇರಿಯನ್ನು ಸಂಪರ್ಕಿಸಿ ವಿವರಣೆ ನೀಡುವಂತೆ ಶಾಸಕ ಅಶೋಕ್ ರೈ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಈ ಹಿಂದೆ ಸಮಸ್ಯೆ ಇದ್ದದ್ದು ನಿಜ ಆದರೆ ಅದನ್ನು ಸರಕಾರ ಬಗೆಹರಿಸಿದೆ. ೯/೧೧ ವಿಚಾರದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಕಾರದ ಗಮನಕ್ಕೆ ತಂದು ಅದನ್ನು ಸರಿಪಡಿಸಲಾಗಿದೆ. ಈಗ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ ಶಾಸಕರು ಕೆಲವು ಪಿಡಿಒಗಳು ಗ್ರಾಮಸ್ಥರನ್ನು ಸತಾಯಿಸುತ್ತಿರುವ ಬಗ್ಗೆ ದೂರುಗಳು ಬಂದಿದೆ ಹಾಗೇನಾದರೂ ತೊಂದರೆಯಾದಲ್ಲಿ ಕಚೇರಿ ಸಂಪರ್ಕ ಮಾಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು. ನರಿಮೊಗರು ಗ್ರಾಮದ ನರಿಮೊಗರು ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು. ಅಕ್ರಮ ಸಕ್ರಮ ಮಾಡಿಸಿಕೊಳ್ಳಿ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದವರು ಅದನ್ನು ಮಾಡಿಸಿಕೊಳ್ಳಿ. ನಾನು ಎಲ್ಲರಿಗೂ ಶಾಸಕ. ನಾನು ಅಭಿವೃದ್ದಿಯಲ್ಲಿ ರಾಜಕೀಯ, ಪಕ್ಷ ಬೇಧ ಮಾಡುವುದಿಲ್ಲ. ರಾಜಧರ್ಮ ಪಾಲನೆ ಮಾಡುವ ಮೂಲಕ ಎಲ್ಲಾ ಜಾತಿ, ಧರ್ಮ, ಪಕ್ಷದವರ ಕೆಲಸವನ್ನು ಮಾಡಬೇಕಾಗುತ್ತದೆ. ಈ ಹಿಂದೆ ಅರ್ಜಿ ಹಾಕಿ ಲಂಚ ಕೊಟ್ಟರೂ ಆಗದ ಕೆಲಸಗಳು ಇದೆ, ಯಾವುದೇ ಮುಜುಗರವಿಲ್ಲದೆ ನನ್ನ ಬಳಿ ಬಂದು ಮಾಡಿಸಿಕೊಳ್ಳಿ ಎಂದು ಶಾಸಕರು ತಿಳಿಸಿದರು. ನಮ್ಮಿಂದ ಕೆಲಸ ಮಾಡಿಸಿಕೊಂಡು ಹೋದವರು ನಮ್ಮ ಜೊತೆ ಇರುತ್ತಾರೆ ಎಂಬ ಪೂರ್ಣ ನಂಬಿಕೆ ನನ್ನಲ್ಲಿದೆ. ಇದುವರೆಗೂ ನಾಲ್ಕು ಗೋಡೆಯ ಮಧ್ಯೆ ನಡೆಯುತ್ತಿದ್ದ ಅಕ್ರಮ ಸಕ್ರಮ ಬೈಠಕನ್ನು ನಿಮ್ಮ ಮನೆ ಬಾಗಿಲ ಮಾಡುತ್ತಿದ್ದೇನೆ. ಅಭಿವೃದ್ದಿ ಪರ ಚಿಂತನೆ ಇರುವವರು ನಮ್ಮ ಜೊತೆ ಇರುತ್ತಾರೆ, ಅಭಿವೃದ್ದಿಯೇ ಬೇಡ ಎಂಬ ಚಿಂತನೆ ಇದ್ದರೆ ಯಾರಿಗಾದರೂ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಮೆಡಿಕಲ್ ಕಾಲೇಜು, ಕುಡಿಯುವ ನೀರು, ಧಾರ್ಮಿಕ ಕೇಂದ್ರಗಳ ಅಭಿವೃದ್ದಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ದಿ ಕಾರ್ಯವನ್ನು ಮಾಡುತ್ತಿದ್ದೇವೆ ನಾವು ಮಾಡುವ ಕೆಲಸ ನಿಮಗೆ ತೃಪ್ತಿ, ನೀವು ಅಭಿವೃದ್ದಿಎಗೆ ಬೆಂಬಲ ನೀಡುತ್ತೀರಿ ಎಂಬ ಭಾವನೆ ಇದ್ದರೆ ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಶಾಸಕರು ಮನವಿ ಮಾಡಿದರು. ಮಕ್ಕಳ ಭವಿಷ್ಯದ ಕಡೆ ಗಮನಕೊಡಿ ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿ, ಅವರು ಕಲಿಯುವ ಪ್ರಾಯದಲ್ಲಿ ದಿಕ್ಕು ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರದ್ದು. ಪ್ರತೀಯೊಬ್ಬ ಪೋಷಕನೂ ಮಕ್ಕಳ ಶ್ರೇಯಸ್ಸನ್ನೇ ಬಯಸುತ್ತಾರೆ. ರಾಜಕೀಯದವರ ದ್ವೇಷ ಮಾತುಗಳನ್ನು ನಂಬಿ ಅವರ ಹಿಂದೆ ಹೋದರೆ ನಿಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಉತ್ತಮ ಶಿಕ್ಷಣ ಕೊಡಿಸಿ ಮುಂದೆ ಅವರು ಉದ್ಯೋಗ ಪಡೆದು ಉತ್ತಮ ಪ್ರಜೆಯಾಗಿ ಬಾಳ್ವೆ ನಡೆಸುವಂತೆ ಪ್ರೇರೇಪಣೆ ನೀಡಬೇಕು ಎಂದು ಶಾಸಕರು ಪೋಷಕರಲ್ಲಿ ಮನವಿ ಮಾಡಿದರು. ಪುತ್ತೂರಿನ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮೆಡಿಕಲ್ ಕಾಲೇಜು, ಕೆಎಂಎಫ್ ಸೇರಿದಂತೆ ಉದ್ಯಮಗಳನ್ನು ಪುತ್ತೂರಿನಲ್ಲಿ ಆರಂಭಿಸಬೇಕು ಎಂಬ ಚಿಂತನೆ ಇದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಕಾರ್ಯದರ್ಶಿ ತಹಶಿಲ್ದಾರ್ ಕೂಡ್ಲಿಗಿ, ಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಉಪಸ್ಥಿತರಿದ್ದರು. ಸುಮಾರು ೧೫ ಮಂದಿಗೆ ೯೪ ಸಿ ಹಕ್ಕು ಪತ್ರ ಹಾಗೂ ೪೫ ಮಂದಿಯ ಅಕ್ರಮ ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Advertisement