Connect with us

ಇತರ

ಒಳಮೊಗ್ರು: ಮುರುವ-ದರ್ಬೆತ್ತಡ್ಕ ಸಂಪರ್ಕ ರಸ್ತೆ ಸೇತುವೆ ನಿರ್ಮಾಣಕ್ಕೆ ೨ ಕೋಟಿ ಮಂಜೂರು ನಾನು ಮಾಡುತ್ತಿರುವ ಅಭಿವೃದ್ದಿ ಕೆಲಸ ನಿಮಗೆ ಒಳ್ಳೆಯದು ಅನಿಸಿದರೆ ಆಶೀರ್ವಾದ ಮಾಡಿ: ಶಾಸಕ ಅಶೋಕ್ ರೈ

Published

on

ಪುತ್ತೂರು: ಚುನಾವಣೆಯ ಸಂದರ್ಭದಲ್ಲಿ ನಾನು ಇಡೀ ಕ್ಷೇತ್ರದಾದ್ಯಂತ ಸಂಚಾರ ಮಾಡಿದ್ದೆ ಆ ವೇಳೆ ಒಂದಷ್ಟು ಜನ ನನ್ನಲ್ಲಿ ವಿವಿಧ ಬೇಡಿಕೆಯನ್ನು ಇಟ್ಟಿದ್ದರು , ಗೆದ್ದರೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದೆ ಈ ಭರವಸೆಯಲ್ಲಿ ಒಳಮೊಗ್ರು ಗ್ರಾಮದ ಮುರುವ- ದರ್ಬೆತ್ತಡ್ಕ ಸಂಪರ್ಕ ಸೇತುವೆಯೂ ಸೇರಿದೆ, ಕೊಟ್ಟ ಮಾತಿನಂತೆ ಇಲ್ಲಿನ ಸೇತುವೆ ನಿರ್ಮಾಣಕ್ಕೆ ೨ ಕೋಟಿ ನೀಡಿದ್ದೇನೆ. ನಾನು ಕ್ಷೇತ್ರದ ಅಭಿವೃದ್ದಿಗಾಗಿ ಮಾಡುತ್ತಿರುವ ಕೆಲಸಗಳು ನಿಮಗೆ ಒಳ್ಳೆಯದು ಎಂಬ ಭಾವನೆ ಇದ್ದರೆ ಮುಂದಿನ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿ ಎಂದು ಶಾಸಕ ಅಶೋಕ್ ರೈ ವಿನಂತಿಸಿದರು. ಅವರು ಒಳಮೊಗ್ರು ಗ್ರಾಮದ ಕುಟಿನೋಪ್ಪಿನಡ್ಕ ಸಮೀಪದ ಮುರುವದಿಂದ ಕಲ್ಲಡ್ಕ ಮೂಲಕ ದರ್ಬೆತ್ತಡ್ಕ ರಸ್ತೆಗೆ ನೂತನ ಸೇತುವೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈಗ ಇರುವ ಸೇತುವೆ ಕಿರಿದಾಗಿದೆ, ಅಗಲ ಕಡಿಮೆ ಇದೆ, ಮಾಜಿ ಶಾಸಕ ವಿನಯಕುಮಾರ್ ಸೊರಕೆಯವರ ಕಾಲದಲ್ಲಿ ಈ ಸೇತುವೆ ನಿರ್ಮಾಣವಾಗಿತ್ತು. ಆಗಿನ ಕಾಲಕ್ಕೆ ಇದುವೇ ದೊಡ್ಡ ಸೇತುವೆಯಾಗಿರಬಹುದು ಆದರೆ ಆ ಬಳಿಕ ಶಾಸಕರಾದವರು ಇಲ್ಲಿನ ಜನರ ಬೇಡಿಕೆಯನ್ನು ಈಡೇರಿಸಿಲ್ಲ. ಯಾಕೆ ಇಲ್ಲಿಗೆ ಸೇತುವೆ ನಿರ್ಮಾಣ ಮಾಡಿಲ್ಲ ಎಂದು ವೋಟು ಹಾಕಿದ ಪ್ರತೀಯೊಬ್ಬರೂ ಚಿಂತನೆ ಮಾಡಬೇಕು. ಈ ಭಾಗದಲ್ಲಿ ಕಾಂಗ್ರೆಸ್ ವೋಟು ಕಡಿಮೆ ಎಂದು ನನ್ನಲ್ಲಿ ಹೇಳಿದ್ದರು ಆದರೂ ನಾನು ಅಭಿವೃದ್ದಿಯಲ್ಲಿ ಪಕ್ಷಬೇಧ ಮಾಡಲ್ಲ ಎಂಬ ಉದ್ದೇಶದಿಂದ ಮತ್ತು ಮುಂದೆ ನನ್ನ ಜೊತೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಬೇಡಿಕೆ ಈಡೇರಿಸಿದ್ದೇನೆ. ಅಗತ್ಯವಾಗಿ ಬೇಕಾದ ಇಲ್ಲಿನ ಸೇತುವೆಯನ್ನು ಮುಂದಿನ ೬ ತಿಂಗಳಲ್ಲಿ ಸಂಚಾರ ಮುಕ್ತವಾಗಬಹುದು ಎಂದು ಹೇಳಿದರು. ನನ್ನ ಪತ್ನಿ ಕೂಡಾ ಬೇಸರಪಟ್ಟಿದ್ದಳು ಈ ಭಾಗಕ್ಕೆ ವೋಟು ಕೇಳಲು ಬಂದಾಗ ನನ್ನ ಪತ್ನಿ ಸೇತುವೆಯ ಕಂಡು ಬೇಸರಮಾಡಿದ್ದಳು. ಚುನಾವಣೆ ಕಳೆದ ಶಾಸಕನಾದ ಮೇಲೆ ಅವಳು ಕೂಡಾ ಇಲ್ಲಿನ ಸೇತುವೆಗೆ ಅನುದಾನ ಇಡುವಂತೆ ಮನವಿ ಮಾಡಿದ್ದಳು. ಈ ಭಾಗದ ಹಮೀದ್ ಎಂಬವರು ಹಲವು ತಿಂಗಳಿಂದ ಇದರ ಬೆನ್ನು ಬಿದ್ದಿದ್ದರು, ದಿನಾಲು ನನಗೆ ಕರೆ ಮಾಡಿ ಸೇತುವೆಯ ವಿಚಾರವನ್ನು ಕೇಳುತ್ತಿದ್ದರು, ಇದೇ ಕಾರಣಕ್ಕೆ ಹಮೀದ್ ರವರಿಂದಲೇ ತೆಂಗಿನ ಕಾಯಿ ಒಡೆಸಿದ್ದೇನೆ. ನಿಮ್ಮ ಬೇಡಿಕೆ ಈಡೇರಿಸಿದ್ದೇನೆ ಮುಂದೆ ನೀವು ನಮ್ಮ ಜೊತೆ ಇರುತ್ತೀರಿ ಎಂಬ ಪೂರ್ಣ ಭರವಸೆಯೂ ನನಗಿದೆ ಎಂದು ಶಾಸಕರು ಹೇಳಿದರು. ಬಡವರ ಕೆಲಸ ಮಾಡುವಾಗ ಬಿಜೆಪಿಯಿಂದ ಬೆಂಬಲ ಇರಲಿಲ್ಲ ನಾನು ಬಿಜೆಪಿಯಲ್ಲಿದ್ದಾಗ ಒಂದಷ್ಟು ಮಂದಿಗೆ ೯೪ ಸಿ, ೯೪ ಸಿಸಿ ಮಾಡಿಕೊಡಿ ಎಂದು ಮಾಜಿ ಶಾಸಕರ ಬಳಿ ಕಳುಹಿಸುತ್ತಿದ್ದೆ ಆದರೆ ಅವರು ಅದನ್ನು ಮಾಡುತ್ತಿರಲಿಲ್ಲ. ಅಶೋಕ್ ರೈ ಕಳಿಸಿದ ಯಾವುದೇ ವ್ಯಕ್ತಿಯನ್ನು ಬಿಜೆಪಿಯವರು ಕೆಲಸ ಮಾಡಿಕೊಡದೆ ನನಗೆ ಅವಮಾನ ಮಾಡುತ್ತಿದ್ದರು. ಬಡವರ ಕೆಲಸ ಮಾಡುವುದು ಬಿಜೆಪಿಗರಿಗೆ ಇಷ್ಟವಿಲ್ಲದೇ ಇರುವುದೇ ಇದಕ್ಕೆ ಸಾಕ್ಷಿಯಾಗಿದೆ. ನಾನು ಬಿಜೆಪಿಯಲ್ಲಿದ್ದಾಗ ಬಿಜೆಪಿಯವರು ಯಾವುದೇ ಕಾರ್ಯಕ್ರಮ ಮಾಡಲಿ ಅವರ ಶರಬತ್ತಿನ ಬಿಲ್‌ನಿಂದ ಹಿಡಿದು ಎಲ್ಲಾ ಬಿಲ್‌ಗಳು ನನ್ನ ಬಳಿಗೇ ಬರುತ್ತಿತ್ತು ನಾನೇ ಅದನ್ನು ಪಾವತಿ ಮಾಡುತ್ತಿದ್ದೆ. ನಾನು ಬಡವರಿಗೆ ಮಾಡುತ್ತಿರುವ ಸೇವಬೆಯನ್ನು ನೋಡಿದ್ದ ಅವರು ಇವನಿಗೆ ಸ್ಥಾನ ಮಾನ ಕೊಟ್ರೆ ಮೇಲೆ ಬರಬಹುದು ಎಂಬ ನಂಜಿನಿಂದ ನನಗೆ ಕೇವಲ ಕಾರ್ಯಕಾರಿಣಿ ಎಂಬ ಸಣ್ಣ ಸದಸ್ಯತ್ವ ಕೊಟ್ಟಿದ್ದರು ಎಂದು ಹಿಂದಿನ ನೆನಪುಗಳನ್ನು ಶಾಸಕರು ಮೆಲುಕು ಹಾಕಿದರು.
ವೋಟಿನ ಸಮಯದಲ್ಲಿ ಫಾರಿನ್ ಟ್ರಿಪ್ ಹೋಗುತ್ತಿದ್ದೆ ನನ್ನ ರಾಜಕೀಯ ಜೀವನದಲ್ಲಿ ನಾನು ಯಾರೊಂದಿಗೂ ತಾಂಟ್ಲಿಕ್ಕೆ ಹೋಗಿಲ್ಲ, ಬಿಜೆಪಿಯಲ್ಲಿರುವಾಗ ನನ್ನ ಊರಿನಲ್ಲಿ ಚುನಾವಣಾ ಪ್ರಚಾರಕ್ಕೂ ಹೋಗುತ್ತಿರಲಿಲ್ಲ. ಊರಿನವರಲ್ಲಿ ತಾಂಟುವುದು ಡೇಂಜರ್ ಎಂಬ ಕಾರಣಕ್ಕೆ ಚುನಾವಣಾ ಸಮಯದಲ್ಲಿ ನಾನು ಫಾರಿನ್‌ಟ್ರಿಪ್ ಹೋಗುತ್ತಿದ್ದೆ. ರಾಜಕೀಯವಾಗಿ ನಾನು ಎಂದಿಗೂ ನಾನು ಬಿಜೆಪಿಯಲ್ಲಿರುವಾಗ ಕಾಂಗ್ರೆಸ್ಸನ್ನು ದೂಷಿಸಲೇ ಇಲ್ಲ, ಯಾವ ನಾಯಕರನ್ನು ತೆಗಳಲೂ ಇಲ್ಲ ಎಂದು ಶಾಸಕರು ಹೇಳಿದರು.
೪೦ ವರ್ಷದ ಬೇಡಿಕೆ ಈಡೇರಿದೆ: ದುರ್ಗಾಪ್ರಸಾದ್ ರೈ ಮುರುವದಲ್ಲಿ ಸೇತುವೆಯಾಗುತ್ತದೆ ಎಂದು ಇಲ್ಲಿನ ಜನ ಕನಸಲ್ಲೂ ನೆನಸಲಿಲ್ಲ. ಈ ಹಿಂದೆ ಸೊರಕೆಯ ಕಾಲದಲ್ಲಿ ಇಲ್ಲಿ ಕಿರಿದಾದ ಸೇತುವೆ ನಿರ್ಮಾಣವಾದ ಕಾರಣ ಜನ ಇಷ್ಟು ವರ್ಷ ಹೊಳೆ ದಾಟುತ್ತಿದ್ದರು ಇಲ್ಲದಿದ್ದರೆ ಏನು ಮಾಡಬೇಕಿತ್ತು? ಜನ ಇದನ್ನು ಮರೆಯಬಾರದು , ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಶಾಸಕರು ಅಭಿವೃದ್ದಿ ಕೆಲಸವನ್ನು ಮಾಡುತ್ತಾರೆ ಎಂಬುದಕ್ಕೆ ಈ ಸೇತುವೆಯೇ ಸಾಕ್ಷಿ. ಅಂದು ಸೊರಕೆ ಮಾಡಿದ್ರು ಇವತ್ತು ಇದೇ ಸೇತುವೆಗೆ ಅಶೋಕ್ ರೈ ೨ ಕೋಟಿ ಅನುದಾನ ನೀಓಡಿ ೪೦ ವರ್ಷದ ಬೇಡಿಕೆ ಈಡೇರಿಸಿದ್ದಾರೆ ಎಂದು ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು. ಸೊರಕೆ ಬಳಿಕ ಅನೇಕ ಮಂದಿ ಶಾಸಕರು ಬಂದ್ರು, ಸಂದರು ಬಂದ್ರು ಆದರೆ ಅವರು ಯಾರೂ ಇಲ್ಲಿಗೆ ಬಂದಿಲ್ಲ, ಸಮಸ್ಯೆ ಆಲಿಸಿಲ್ಲ. ಕಾಂಗ್ರೆಸ್ ಶಾಸಕ ಅಶೋಕ್ ರೈ ಬಂದು ಸಂಕಷ್ಟ ಆಲಿಸಿದ್ದಾರೆ ಎಂದ ಅವರು ಕಾಂಗ್ರೆಸ್ ಎಂದೂ ಅಭಿವೃದ್ದಿ ಪರ ಎಂಬುದು ಸಾಭೀತಾಗಿದೆ. ವೋಟಿನ ಸಮಯದಲ್ಲಿ ಧರ್ಮದ ಹೆಸರು ಹೇಳಿ ವೋಟು ಪಡೆಯುವವರು ಅಭಿವೃದ್ದಿ ಕೆಲಸ ಮಾಡುವುದಿಲ್ಲ ಅವರಿಗಹೆ ಅದು ಬೇಕಾಗಿಲ್ಲ , ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಕೈ ಬಲಪಡಿಸುವ ಕೆಲಸ ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಪೂಜಾರಿ ಬೊಳ್ಳಾಡಿ, ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಯುವ ಕಾಂಗ್ರೆಸ್ ಮುಖಂಡ ರಕ್ಷಿತ್ ರೈ ಮುಗೇಉ, ಬೂತ್ ಅಧ್ಯಕ್ಷ ಅಝೀಝ್ ನೀರ್ಪಾಡಿ, ಗೋವಿಂದ ನಾಯ್ಕ, ಹಂಝ ಉಜಿರೋಡಿ, ಸ್ಥಳೀಯ ಮುಖಂಡರಾದ ಸಂಕಪ್ಪ ಆಳ್ವ, ಸುಧಾಕರ ಆಳ್ವ, ತ್ಯಾಂಪಣ್ಣ ಆಳ್ವ, ವಸಂತ ಶೆಟ್ಟಿ, ಹಾರಿಸ್ ಮುಳಿಯಡ್ಕ, ರಮೇಶ್ ಆಳ್ವ ಕಲ್ಲಡ್ಕ, ಸುಧಾಕರ ಆಳ್ವ ಕಲ್ಲಡ್ಕ, ಜಯರಾಮ ರೈ, ಮೋಹನ ರೈ ಕಲ್ಲಡ್ಕ, ಚಿದಾನಂದ ರೈ, ರಾಧಾಕೃಷ್ಣ ರೈ, ರಾಜೇಶ್ ರೈ, ಜನಾರ್ಧನ ರೈ, ಮಂಜುನಾಥ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಬದ್ರು ಪರ್ಪುಂಜ, ರಝಾಕ್ ಪರ್ಪುಂಜ, ಮಹಮ್ಮದ್ ಅಡ್ಕ,ಪ್ರವೀಣ್ ಅಡ್ಕ ಮೊದಲಾದವರು ಇದ್ದರು. ಸೇತುವೆಗೆ ಅನುದಾನ ಮಂಜೂರು ಮಾಡಿದ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮಕ್ಕೆ ಸ್ವಾಗತಿಸಿ ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement