Connect with us

ಇತರ

ಗ್ರಾಮ ಲೆಕ್ಕಧಿಕಾರಿ ಯಿಂದ 5ಲಕ್ಷ ಲಂಚ ಬೇಡಿಕೆ….ಲಂಚ ನುಂಗಣ್ಣ ವಿ.ಎ ಸೇರಿ ಇಬ್ಬರ ಲೋಕಾಯುಕ್ತ ಕಸ್ಟಡಿ…!!!

Published

on

ಬೀದರ್: ಜಿಲ್ಲೆಯ ಮರಕುಂದಾ ಗ್ರಾಮದಲ್ಲಿ ಮನೆ ಮ್ಯೂಟೇಷನ್ ಕಾರ್ಯಕ್ಕಾಗಿ ಲಂಚ ಪಡೆಯುತ್ತಿದ್ದ ಗ್ರಾಮಾಡಳಿತಾಧಿಕಾರಿ (ವಿಎ) ಹಾಗೂ ಆತನ ಸಹಚರರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮರಕುಂದಾ ಗ್ರಾಮದ ನಿವಾಸಿ ಮಹಾದೇವ್ ಶಾಂತಪ್ಪ ಅವರು ತಮ್ಮ ಮನೆಯ ಮ್ಯೂಟೇಷನ್ ಕಾರ್ಯಕ್ಕಾಗಿ ವಿಎ ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದರು. ಈ ಕೆಲಸಕ್ಕಾಗಿ ಶಿವಕುಮಾರ್ ಶಿವಕುಮಾರ್ ಹಾಗೂ ಸಹಚರ ಶರಣಯ್ಯಾ ಸ್ವಾಮಿ ಒಟ್ಟು 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲಂಚದ ಬೇಡಿಕೆಯಿಂದ ಬೇಸತ್ತ ಮಹಾದೇವ್ ಅವರು ಬೀದರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ತಂಡ, ಗ್ರಾಮದ ಹೊರವಲಯದ ಧಾಬಾ ಒಂದರಲ್ಲಿ ಮುಂಗಡವಾಗಿ 2.5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದೆ. ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಐ ಅರ್ಜುನಪ್ಪ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು. ದಾಳಿಯ ವೇಳೆ ಲಂಚದ ಹಣ ವಶಪಡಿಸಿಕೊಂಡು ಇಬ್ಬರನ್ನೂ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.    

Continue Reading
Click to comment

Leave a Reply

Your email address will not be published. Required fields are marked *

Advertisement