Published
1 hour agoon
By
Akkare News
ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣ ಹಾಗೂ ಪುನರ್ವಸತಿ ಕೇಂದ್ರಕ್ಕೆ ಇಂದು ಮಹತ್ವದ ದಿನವಾಗಿದ್ದು, ಸುಮಾರು ₹37 ಲಕ್ಷಗಳ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಫಿಸಿಯೋಥೆರಪಿ ಕಟ್ಟಡ, ಮಾತಿನ (ಸ್ಪೀಚ್) ಥೆರಪಿ ಕಟ್ಟಡ, ಶೌಚಾಲಯ, ಇಂಟರ್ಲಾಕ್ ಅಳವಡಿಕೆ ಹಾಗೂ ಮೇಲ್ಛಾವಣಿ ಕಾಮಗಾರಿಗಳನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು.
ವಿಶೇಷ ಅಗತ್ಯವುಳ್ಳ ಮಕ್ಕಳ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ಮಾನವೀಯತೆ ಮತ್ತು ಸಾಮಾಜಿಕ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಫಿಸಿಯೋಥೆರಪಿ ಹಾಗೂ ಮಾತಿನ ಥೆರಪಿ ಸೌಲಭ್ಯಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಮಹತ್ತರ ನೆರವಾಗಲಿದ್ದು, ಅವರ ಭವಿಷ್ಯವನ್ನು ಇನ್ನಷ್ಟು ಭದ್ರಗೊಳಿಸಲಿವೆ.