Connect with us

ಇತರ

ಮುಗಿಯದ ಸರ್ವರ್ ಸಮಸ್ಯೆ : ಆಹಾರ ಇಲಾಖೆಗೆ ಗ್ರಾಹಕರಿಂದ ಹಿಡಿಶಾಪ

Published

on

ಪುತ್ತೂರು: ಆಹಾರ ಇಲಾಖೆಯ ಸರ್ವರ್ ದೋಷದಿಂದ ಕಳೆದ ಒಂದು ವಾರದಿಂದ ಪಡಿತರ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದು, ಮೇ ತಿಂಗಳಿನ ಪಡಿತರ ಪಡೆಯಲು ಹರಸಾಹಸ ಪಡುವಂತಾಗಿದೆ. ಪಡಿತರ ಸಾಮಾಗ್ರಿ ಪಡೆಯಲು ಬೆಳಗ್ಗಿನಿಂದ ಸಂಜೆಯವರೆಗೆ ಕಾದು ಕಾದು ಗ್ರಾಹಕರು ಆಹಾರ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
1 ವಾರದಿಂದ ಸರ್ವರ್ ಸಮಸ್ಯೆ: ಆಹಾರ ಇಲಾಖೆಯ ಪಡಿತರ ವಿತರಣೆಯ ಸರ್ವ‌್ರನಲ್ಲಿ ತೊಂದರೆ ಉಂಟಾಗಿ ಒಂದು ವಾರ ಕಳೆದರೂ ಸುಧಾರಣೆ ಕಂಡಿಲ್ಲ. ಕಳೆದ ಒಂದು ವಾರದಿಂದ ಸರ್ವರ್ ತುಂಬಾ ಕ್ಲೋ ಆಗಿ ವರ್ಕ್ ಆಗುತ್ತಿದ್ದು, ಬಯೋಮೆಟ್ರಿಕ್ ಪಡೆಯಲು ಪಡಿತರ ವಿತರಕರು ಹರಸಾಹಸ ಪಡುತ್ತಿದ್ದಾರೆ. 1000ಕ್ಕಿಂತ ಅಧಿಕ ರೇಷನ್ ಕಾರ್ಡ್ ಹೊಂದಿರುವ ಪಡಿತರ ವಿತರಣೆ ಕೇಂದ್ರಗಳಲ್ಲಿ ಜನ ಬೆಳಗ್ಗಿನಿಂದ ಸಾಲುಗಟ್ಟಿ ನಿಂತರೂ ಸಂಜೆಯ ವೇಳೆಗೆ 50ರಿಂದ 60 ಗ್ರಾಹಕರಿಗೆ ಮಾತ್ರ ಪಡಿತರ ವಿತರಣೆ ಸಾಧ್ಯವಾಗುತ್ತಿದೆ ಎಂದು ಪಡಿತರ ವಿತರಕರು ತಿಳಿಸಿದ್ದಾರೆ. ಇಂದು ಸರ್ವ‌್ರನಲ್ಲಿ ತೀವ್ರ ಸಂಕಷ್ಟ: ಮೇ 27ರಂದು ಬೆಳಗ್ಗಿನಿಂದಲೇ ಸರ್ವರ್ ತೀವ್ರ ಕ್ಲೋ ಆಗಿದ್ದು ಗಂಟೆಗೆ 2 ಗ್ರಾಹಕರಿಗೆ ಮಾತ್ರ ಪಡಿತರ ನೀಡಲು ಸಾಧ್ಯವಾಗುತ್ತಿದೆ. ಇಲಾಖಾ ಅಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ: ಆಹಾರ ಇಲಾಖೆಯ ಸರ್ವ‌್ರನ ತೀವ್ರ ಸಮಸ್ಯೆಯ ಬಗ್ಗೆ ಪಡಿತರ ವಿತರಕರು ಮತ್ತು ಗ್ರಾಹಕರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂಬ ದೂರು ಕೂಡ ವ್ಯಕ್ತವಾಗುತ್ತಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version