ಅಳಿಕೆ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಳಿಕೆ ವಲಯದ ತ್ರೈಮಾಸಿಕ ಸಭೆಯನ್ನು ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು. ಯೋಜನೆಯ ಅಳಿಕೆ ವಲಯದ ಅಳಿಕೆ ಒಕ್ಕೂಟದ ನೂತನ ಅಧ್ಯಕ್ಷರಾಗಿ ಪ್ರವೀಣ್ ಪೂಜಾರಿ ಸಣ್ಣಗುತ್ತು ಇವರನ್ನು ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಸಣ್ಣಗುತ್ತು ಇವರ ಸಹಯೋಗದೊಂದಿಗೆ 39 ವಿಧ್ಯಾರ್ಥಿಯವರಿಗೆ ಉಚಿತವಾಗಿ ಶಾಲಾಪುಸ್ತಕವನ್ನು ವಿತರಣೆ ಮಾಡಿ ಇದರಿಂದ ಬಡಮಕ್ಕಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.ಪ್ರತಿವರ್ಷವೂ ಉಚಿತ ಪುಸ್ತಕ ವಿತರಣೆ ಮಾಡುತ್ತಾ ಬಂದಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು ರವೀಶ್,ಅಳಿಕೆ ವಲಯದ ಮೇಲ್ವಿಚಾರಕಿ ಮೀನಾಕ್ಷಿ, ಅಳಿಕೆ ಗ್ರಾಮ ನಿಕಟಪೂರ್ವ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕೃಷಿಕರಾದ ಮೋಹನ್ ಶೆಟ್ಟಿ, ಸೇವಪ್ರತಿನಿಧಿ ಚಂದ್ರಾವತಿ, ಒಕ್ಕೂಟದ ಎಲ್ಲಾ ಪದಾಧಿಕಾರಿಯವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಒಕ್ಕೂಟದ ತ್ರೈಮಾಸಿಕ ನಡೆಸಿ ಸಭೆಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಯವರನ್ನು ಬದಲಾವಣೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಿವಪ್ಪ ನಾಯ್ಕ್. ಕಾರ್ಯದರ್ಶಿ ಶ್ರೀಮತಿ ವಸಂತಿ .ಜೊತೆ ಕಾರ್ಯದರ್ಶಿ ಗಿರೀಶ್ ಮಡಿಯಾಲ ಕೋಶಾಧಿಕಾರಿ ಸೌಮ್ಯಲತಾ ಏರುಂಬು ಆಯ್ಕೆಯಾದರು.. ಈ ಕಾರ್ಯಕ್ರಮವನ್ನು ಕವಿತರವರು ನಿರ್ವಹಿಸಿ ಪ್ರವೀಣ್ ಸಣ್ಣಗುತ್ತು ಸ್ವಾಗತಿಸಿದರು.ಮೇಲ್ವಿಚಾರಕೀಯದ ಮೀನಾಕ್ಷಿಯವರು ವಂದಿಸಿದರು.