Connect with us

ಸ್ಥಳೀಯ

ಬಿಲ್ಲವ ಸಮಾಜದ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿದ ಅನಿತಾ ಕಾಸರಗೋಡು ವಿರುದ್ಧ ದೂರು

Published

on

​ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಅಧ್ಯಕ್ಷ ಭುವನೇಶ್ ಪಚಿನಡ್ಕ ಇವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಬಿಲ್ಲವ ಸಂಘಗಳ ಉಪಸ್ಥಿತಿಯಲ್ಲಿ ತಾಲೂಕು ಕಛೇರಿ ಬಂಟ್ವಾಳ ದಲ್ಲಿ ಹರಿಕೃಷ್ಣ ಬಂಟ್ವಾಳರವರು ಖಂಡನಾ ನಿರ್ಣಯ ಹಕ್ಕೋತ್ತಾಯವನ್ನು ಮಂಡಿಸಿ ಬಂಟ್ವಾಳ ತಹಶೀಲ್ದಾರರು ಮಂಜುನಾಥ್ ಇವರಿಗೆ ಮನವಿ ನೀಡಲಾಯಿತು,

 

ಹಾಗೂ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಇವರಿಗೂ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಬೂಡದ ಅದ್ಯಕ್ಷರು, ರಾಷ್ಟ್ರೀಯ ಬಿಲ್ಲವ ಮಹಾಮಂಡಳದ ಕೋಶಾಧಿಕಾರಿ ಬೇಬಿ ಕುಂದರ್ ಹಾಗೂ ಸದಸ್ಯರಾದ ದಾಮೋದರ ಪೂಜಾರಿ ಸಿದ್ಧಕಟ್ಟೆ, ತಾಲೂಕು ಸಂಘದ ಮಾಜಿ ಅಧ್ಯಕ್ಷರುಗಳು ಬಂಟ್ವಾಳ ಬಿಲ್ಲವ ಸಂಘದ ಸದಸ್ಯರೊಂದಿಗೆ,ಸಿದ್ಧಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷರಾದ ಕಿರಣ್ ಕುಮಾರ್ ಮಂಜಿಲ ಹಾಗೂ ಕಾರ್ಯದರ್ಶಿ ರತ್ನಾಕರ್ ಮದಂಗೋಡಿ, ಕೋಶಾಧಿಕಾರಿ ಯೋಗೀಶ್ ಕೇರ್ನಡೆ, ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಜಗದೀಶ್ ಕೊಯಿಲ,ಪ್ರಭಾಕರ್ ಪೂಜಾರಿ ಮೈರೆಬೆಟ್ಟು, ಗಣೇಶ್ ಪೂಜಾರಿ ದೇವಸ, ಮಹಿಳಾ ಸಮಿತಿಯ ಜಲಜ ಡಿ ಪೂಜಾರಿ, ಸುಶೀಲ ಸುರೇಶ್ ಕೊಳಕ್ಕೆ ಬೈಲ್, ಕರ್ಪೆ ಗ್ರಾಮಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ , ರಘು ಪೂಜಾರಿ ಕುಪ್ಪೆಟ್ಟು , ಉಮೇಶ್ ಪೂಜಾರಿ ಬೊಲ್ಲಿ, ಹಾಗೂ ತಾಲೂಕಿನ ವಿವಿಧ ಬಿಲ್ಲವ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement