Published
3 hours agoon
By
Akkare News
ಮಾಣಿ : ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರತರಲು ಹಾಗೂ ಅವರ ಕನಸುಗಳ ಸಾಕಾರಕ್ಕಾಗಿ ಸಂತಸದಾಯಕ ಕಲಿಕಾ ವಾತಾವರಣ ಅತ್ಯಗತ್ಯ” ಎಂದು ಬಂಟ್ವಾಳ ಬಿ.ಐ.ಆರ್.ಟಿ. ಸುರೇಖಾ ಏರವಾಳ ಅಭಿಪ್ರಾಯಪಟ್ಟರು.
ಅವರು ಬಂಟ್ವಾಳ ತಾಲೂಕಿನ ನೆಟ್ಲಾ ಮುಡ್ಡೂರು ಗ್ರಾಮದ ದ. ಕ. ಜಿ. ಪಂ. ಕಿರಿಯ ಪ್ರಾಥಮಿಕ ಶಾಲೆ ಏಮಾಜೆ ಇಲ್ಲಿ ಜೂನ್ 16, ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದ *ಸೃಜನೋತ್ಸವ -2026’ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಶಾಲೆಯ ಮಹತ್ವಾಕಾಂಕ್ಷೆಯ ದ್ವಿ-ಭಾಷಾ ಮಾಧ್ಯಮಕ್ಕೂ ಚಾಲನೆ ನೀಡಿದರು.

ವಿದ್ಯಾರ್ಥಿಗಳಿಗೆ ಉಚಿತ ಪರಿಕರಗಳ ವಿತರಣೆ:* ಮಕ್ಕಳ ಶೈಕ್ಷಣಿಕ ಉತ್ತೇಜನಕ್ಕಾಗಿ ದಾನಿಗಳ ಸಹಕಾರದೊಂದಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು: *ಸಮವಸ್ತ್ರ ವಿತರಣೆ:* ಮಾಜಿ ಜನಪ್ರತಿನಿಧಿಗಳಾದ ಸಮಿತ ಡಿ. ಪೂಜಾರಿ ಹಾಗೂ ಧನಂಜಯ ಗೌಡ ಅವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು. *ಉಚಿತ ನೋಟ್ ಪುಸ್ತಕ ವಿತರಣೆ:* ಉರ್ದಿಲ ಗುತ್ತು ರಾಮ್ ಪ್ರಸಾದ್ ರೈ ಇವರ ಕೊಡುಗೆಯಾಗಿದ್ದ ಉಚಿತ ನೋಟ್ ಪುಸ್ತಕಗಳನ್ನು ನಿರಂಜನ್ ರೈ ಕುರ್ಲೆತ್ತಿಮಾರು ಅವರು ಮಕ್ಕಳಿಗೆ ವಿತರಿಸಿದರು. *ಉಚಿತ ಟೈ, ಐಡಿ ಕಾರ್ಡ್, ಬೆಲ್ಟ್ ವಿತರಣೆ:* ದತ್ತ ಕೃಪಾ ಮಾಣಿಯ ಸದಾಶಿವ ಶೆಟ್ಟಿ ಅವರ ಕೊಡುಗೆಯಾಗಿದ್ದ ಟೈ, ಐಡಿ ಕಾರ್ಡ್ ಮತ್ತು ಬೆಲ್ಟ್ಗಳನ್ನು ರಾಜನಾರಾಯಣ ಭಟ್ ಅವರು ವಿತರಿಸಿದರು.




