Connect with us

ಸ್ಥಳೀಯ

ಎ.ವಿ.ಜಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Published

on

​ಪುತ್ತೂರು : ಪುತ್ತೂರಿನ ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಶಾಲೆಯ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯು ದಿನಾಂಕ 20-06-2026 ರಂದು ನಡೆಯಿತು.

ಪುತ್ತೂರಿನ ಖ್ಯಾತ ನೋಟರಿ ವಕೀಲರಾದ ಶ್ರೀ ಭಾಸ್ಕರ ಗೌಡ ಕೋಡಿಂಬಾಳ ದೀಪ ಬೆಳಗಿಸಿ ವಿದ್ಯಾರ್ಥಿ ಸರಕಾರದ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದವರಿಗೆ ಬ್ಯಾಡ್ಜ್‌ ನೀಡುವ ಮೂಲಕ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಬಳಿಕ ಮಾತನಾಡಿ “ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವ ಬೆಳೆಸಿಕೊಳ್ಳಲು ಹಾಗೂ ಜೀವನದಲ್ಲಿ ಶಿಸ್ತು ಮತ್ತು ನಿಯಮ ಪಾಲನೆಗೆ ಹಾಗೂ ಶಾಲೆಯ ಕೆಲಸಕಾರ್ಯಗಳು ಸುಗಮವಾಗಿ ನಡೆಯಲು ವಿದ್ಯಾರ್ಥಿ ಸಂಘ ಅಗತ್ಯ” ಎಂದು ಹೇಳಿ ಎಲ್ಲ ಪದಾಧಿಕಾರಿಗಳಿಗೂ ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟರಮಣ ಗೌಡ ಕಳುವಾಜೆಯವರು ಮಾತನಾಡಿ “ಶಾಲೆಯ ಪ್ರಗತಿಗೆ ವಿದ್ಯಾರ್ಥಿಗಳ ಸಹಕಾರ ಹಾಗೂ ಕ್ರೀಯಾಶೀಲವಾಗಿ ತೊಡಗಿಸಿಕೊಳ್ಳುವಿಕೆ ಅತೀ ಅಗತ್ಯ. ಅದಕ್ಕೆ ವಿದ್ಯಾರ್ಥಿ ಸಂಘ ಒಂದು ಉತ್ತಮ ವೇದಿಕೆ” ಎನ್ನುತ್ತಾ ಶುಭಕೋರಿದರು. ಶಾಲೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿಯಾಗಿರುವ ಶ್ರೀ ಗುಡ್ಡಪ್ಪ ಗೌಡ ಬಲ್ಯ ಮಾತನಾಡಿ “ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಸರಕಾರದಷ್ಟೇ ಜವಾಬ್ದಾರಿ ಪ್ರತಿಪಕ್ಷಕ್ಕೂ ಇದೆ. ಪ್ರಜಾಪ್ರಭುತ್ವದ ಅಡಿಗಲ್ಲು ವಿದ್ಯಾರ್ಥಿ ಸರಕಾರ” ಎಂದರು.

ಶಾಲೆಯ ಮುಖೋಪಾಧ್ಯಾಯರಾದ ಶ್ರೀ ಅಮರನಾಥ್‌ ಪಟ್ಟೆ ಪ್ರತಿಜ್ಞಾ ವಿಧಿ ಭೋಧಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶ್ರೀ ಎ.ವಿ. ನಾರಾಯಣ, ನಿರ್ದೇಶಕರಾದ ಶ್ರೀಮತಿ ಪುಷ್ಪಾವತಿ ಕಳುವಾಜೆ, ಉಪಾಧ್ಯಕ್ಷರಾದ ಶ್ರೀ ಉಮೇಶ್‌ ಮಲುವೇಳು, ವಿದ್ಯಾರ್ಥಿ ಸಂಘದ ನಾಯಕ ತನ್ವಿತ್‌ ಉಪಸ್ಥಿತರಿದ್ದರು.

​ ವಿದ್ಯಾರ್ಥಿನಿಯರಾದ ಪ್ರಣಮ್ಯ,ಯುಕ್ತ ಮತ್ತು ಹರ್ಷಿತಾ ಇವರು ಪ್ರಾರ್ಥನೆ ಮಾಡಿದರು. ವಿಖ್ಯಾತ್‌ ಸಂವಿಧಾನದ ಪೂರ್ವಪೀಠಿಕೆ ವಾಚಿಸಿದನು. ಶಿಕ್ಷಕಿಯರಾದ ಶ್ರೀಮತಿ ರಾಧಾ ಸ್ವಾಗತಿಸಿ, ಶ್ರೀಮತಿ ಪ್ರಮೀಳಾ ವಿದ್ಯಾರ್ಥಿ ಸರಕಾರದ ವಿವಿಧ ಮಂತ್ರಿಗಳ ಜವಾಬ್ದಾರಿಯನ್ನು ತಿಳಿಸಿದರು. ಕುಮಾರಿ ಸುನಯನ ಚುನಾವಣಾ ಪ್ರಕ್ರಿಯೆಯ ಮಾಹಿತಿ ನೀಡಿದರು. ಶ್ರೀಮತಿ ಸುಚಿತಾ ಅತಿಥಿಗಳನ್ನು ಪರಿಚಯಿಸಿ, ಕುಮಾರಿ ಕೃಪಾಶ್ರೀ ವಂದನಾರ್ಪಣೆ ಗೈದರು. ಶ್ರೀಮತಿ ರೀಮಾಲೋಬೋ ಅವರು ಪೂರ್ತಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಪ್ರತಿಭಾದೇವಿ, ಬೋಧಕ- ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಪಾಲ್ಗೊಂಡಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement