Connect with us

ಇತರ

“ಬನ” ಚಿತ್ರದ ಪೋಸ್ಟರ್ ರಿಲೀಸ್ ಪುತ್ತೂರಿನ ತೆರೆ ಮರೆಯ ಕಲಾವಿದ ಶರತ್ ಆಳ್ವ, ನಿಹಾಲ್ ರೈ

Published

on

ಮಂಗಳೂರು: ಈಗಾಗಲೇ ಬಹು ನಿರೀಕ್ಷೆ ಮೂಡಿಸಿರುವ ”ಬನ“ ಚಿತ್ರದ ಟ್ರೇಲರ್ ಇದೆ ನಾಗರಪಂಚಮಿಗೆ ಬಿಡುಗಡೆಯಾಗಲಿದೆ. ಬಹುತೇಕ ಯುವ ನಟರ ಈ ಚಿತ್ರದಲ್ಲಿ ಮೊದಲ ಬಾರಿಗೆ ನಿಹಾಲ್ ರೈ ಹಾಗು ಶರತ್ ಆಳ್ವ ಪ್ರಮುಖ ಪಾತ್ರದಲ್ಲಿ ಬೆಳ್ಳೆತೆರೆಯಲ್ಲಿ ಮಿಂಚಲು ಸಿದ್ದರಾಗಿದ್ದಾರೆ. ಖ್ಯಾತ ವಾರ್ತಾ ವಾಚಕ ಜಯಪ್ರಕಾಶ್ ಶೆಟ್ಟಿ ತುಳು ಚಿತ್ರದಲ್ಲಿ ನಟಿಸುತ್ತಿರುವುದರ ಮೂಲಕ ಈ ಚಿತ್ರ ಈಗಾಗಲೇ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮನೋಹರ್ ರೈ ವೈಪಾಲ ಈಶಿ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಯಶಸ್ವಿ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ನುಳಿಯಾಲು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜಯ ಕಾರ್ತಿ ಅವರ ಸಂಗೀತ ಅರುಣ್ ರೈ ಪುತ್ತೂರು ಅವರ ಛಾಯಾಗ್ರಹಣ ಹಾಗೂ ನವೀನ್ ನೇರೋಳ್ತಡಿ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರ ಕನ್ನಡ ಹಾಗು ತುಳುವಿನಲ್ಲಿ ಅಕ್ಟೊಬರ್ 23ಕ್ಕೆ ಬಿಡುಗಡೆಯಾಗಲಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement