Published
2 hours agoon
By
Akkare News
ವೇದಿಕೆಯಲ್ಲಿ ಸಿಎಂ ಮೈಕ್ ಹಿಡಿಯುತ್ತಿದ್ದಂತೆಯೇ ಅಭಿಮಾನಿಗಳ ಘೋಷಣೆ ಜೋರಾಗಿದ್ದು, ಭಾಷಣಕ್ಕೆ ಕೆಲಕಾಲ ಅಡಚಣೆ ಉಂಟಾಯಿತು. ಘೋಷಣೆಗಳು ಮುಂದುವರಿದ ಕಾರಣ ಮುಖ್ಯಮಂತ್ರಿ ಕೆಲ ಹೊತ್ತು ಭಾಷಣ ನಿಲ್ಲಿಸಿ ಪರಿಸ್ಥಿತಿಯನ್ನ ಸಮಾಧಾನಗೊಳಿಸಲು ಪ್ರಯತ್ನಿಸಿದರು. 
ದಚ್ಚುʼ ಫ್ಯಾನ್ಸ್ಗೆ ಸಿಎಂ ಕಿವಿಮಾತು ಇನ್ನೂ ನಿರಂತರವಾಗಿ ʻಡಿ ಬಾಸ್, ಡಿಬಾಸ್ʼ ಘೋಷಣೆ ಕೂಗುತ್ತಿದ್ದ ಅಭಿಮಾನಿಗಳಿಗೆ ಸಿಎಂ ಕಿವಿಮಾತನ್ನೂ ಹೇಳಿದರು. ಇದು ಪವಿತ್ರವಾದ ಸಭೆ, ನಿಮ್ಮ ಅಭಿಮಾನಕ್ಕೆ ಗೌರವ ಕೊಡ್ತೀನಿ. ಆದ್ರೆ ನೀವು ಕೋರ್ಟ್ ವಿಚಾರವನ್ನ ತಂದು ನನ್ನ ಮೇಲೆ ಒತ್ತಡ ಹೇರಬೇಡಿ. ನಿಮ್ಮ ಭಾವನೆ ನನಗೆ ಗೊತ್ತಿದೆ. ನಾನಿಲ್ಲಿ ನಿಮ್ಮ ಸೇವಕನಾಗಿ ಬಂದಿದ್ದೇನೆ. ನಾನು ಸಿಎಂ ಆಗಿರಬಹುದು, ಆದ್ರೆ ರಾಮನಗರ ಜಿಲ್ಲೆಯ ಮಗ, ಈ ನಿಮ್ಮ ಮಗನನ್ನ ಕಾಪಾಡಿಕೊಳ್ಳುವ ಕೆಲಸವನ್ನ ನೀವು ಮಾಡಬೇಕು ಎಂದರು.
ಮುಂದುವರಿದು. ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕು, ನಾನು ದೇವರಲ್ಲಿ ಪ್ರಾರ್ಥನೆ ಮಾಡಿದಂತೆ, ನೀವು ದೇವರಲ್ಲಿ ಪ್ರಾರ್ಥನೆ ಮಾಡಿ. ಪ್ರಯತ್ನ ವಿಫಲವಾದ್ರೂ ಪ್ರಾರ್ಥನೆ ವಿಫಲವಾಗಲ್ಲ ಎಂದು ನಾನು ಈ ಹಿಂದೆ ಚಾಮುಂಡಿ ಬೆಟ್ಟದಲ್ಲಿ ಹೇಳಿದ್ದೆ. ನೀವು ಕೂಡ ಚಾಮುಂಡಿಗೆ ಪ್ರಾರ್ಥನೆ ಮಾಡಿ, ತಾಯಿ ಒಳ್ಳಯದು ಮಾಡ್ತಾಳೆ ಎಂದು ಹೇಳಿದರು.




