Connect with us

ಇತರ

ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಳ: ಸಚಿವ ಸಂಪುಟ ನಿರ್ಧಾರ

Published

on

ಬೆಂಗಳೂರು: ಕೆಎಂಎಫ್‌ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಅನ್ವಯವಾಗುವಂತೆ 8 ರೂಪಾಯಿ ಹೆಚ್ಚಳ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ನವೆಂಬರ್ 1 ರಿಂದ ಜಾರಿಗೆ ಬರಲಿದೆ.

ಈ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಾಲಿನ ದರ ಹೆಚ್ಚಳಕ್ಕೆ ಹಲವು ತಿಂಗಳುಗಳಿಂದ ಹಾಲು ನಿಗಮ ಮಂಡಳಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಕೆಎಂಎಫ್‌ ಕೂಡ ಸರ್ಕಾರಕ್ಕೆ ಕಳೆದ ತಿಂಗಳೇ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಸರ್ಕಾರ ದರ ಏರಿಕೆಗೆ ಸಮ್ಮತಿ ಸೂಚಿಸಿದೆ.

ರೈತರಿಗೆ ಅಧಿಕ ಪಾಲು

ದರ ಏರಿಕೆಯ 8 ರೂಪಾಯಿಯಲ್ಲಿ 7 ರೂಪಾಯಿಯನ್ನು ರೈತರಿಗೆ ಸಹಾಯಧನವಾಗಿ ನೀಡಲು ನಿರ್ಧರಿಸಲಾಗಿದೆ. ರೈತರಿಗೆ ಬಮುಲ್ ವ್ಯಾಪ್ತಿಯಲ್ಲಿ ಸದ್ಯ ಪ್ರತಿ ಲೀಟರ್‌ಗೆ 33 ರೂ. ದಿಂದ 35 ರೂ. ನೀಡಲಾಗುತ್ತಿದ್ದು, ಆ ಮೊತ್ತ 40 ರಿಂದ 42 ರೂಪಾಯಿಗೆ ಹೆಚ್ಚಳವಾಗಲಿದೆ. ಹೆಚ್ಚುವರಿ 1 ರೂಪಾಯಿಯನ್ನು ಹಾಲು ಮಂಡಳಿಗಳ ಪಾಲಾಗಿದೆ.

ಪ್ರಸ್ತುತ ನಂದಿನಿ ಹಾಲಿನ ದರ ಎಷ್ಟಿದೆ?

ಹಾಲಿನ ವಿಧ / ಉತ್ಪನ್ನ 500 ಎಂಎಲ್ (ರೂ.) 1 ಲೀಟರ್ (ರೂ.)
ಟೋನ್ಡ್ ಹಾಲು 24 46
ಶುಭಂ ಹಾಲು 26 52
ಸಮೃದ್ಧಿ ಹಾಲು 28 56
ಹೋಮೋಜಿನೈಸ್ಡ್ ಹಸುವಿನ ಹಾಲು 26 52
ಸ್ಪೆಷಲ್ ಹಾಲು 27 54
ಗುಡ್‌ಲೈಫ್ ಹಾಲು 36 70
ನಂದಿನಿ ಮೊಸರು 26 50
ನಂದಿನಿ ಶುದ್ಧ ತುಪ್ಪ 340 – 350 680 – 700

ಹೊಸ ದರ ಎಷ್ಟಿರಬಹುದು?

  • ಟೋನ್ಡ್ ಹಾಲು (ನೀಲಿ ಪ್ಯಾಕೆಟ್): 46 ರಿಂದ 54 ರೂ.
  • ಶುಭಂ ಹಾಲು (ಕಿತ್ತಳೆ ಪ್ಯಾಕೆಟ್): 52 ರಿಂದ 60 ರೂ.
  • ಸಮೃದ್ಧಿ ಫುಲ್ ಕ್ರೀಮ್ ಹಾಲು: 56 ರಿಂದ 64 ರೂ.

ಹೊಸ ದರಪಟ್ಟಿಯನ್ನು ಕೆಎಂಎಫ್‌ ಬಿಡುಗಡೆ ಮಾಡಬೇಕಿದ್ದು, ಆ ಬಳಿಕ ನೂತನ ದರ ಎಷ್ಟಾಗಲಿದೆ ಎಂಬ ಖಚಿತ ಮಾಹಿತಿ ಸಿಗಲಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement