Published
43 minutes agoon
By
Akkare News
ನಂತರ ಇಬ್ಬರ ನಡುವೆ ಸಂಪರ್ಕ ಮುಂದುವರಿದಿದ್ದು, ಸಮೀರ್ ಯುವತಿಯನ್ನು ಮಡಿವಾಳದ ಹೋಟೆಲ್ಗೆ ಆಹ್ವಾನಿಸಿದ್ದಾನೆ. ಹೋಟೆಲ್ಗೆ ತೆರಳಿದ ಬಳಿಕ ಇಬ್ಬರೂ ಮದ್ಯ ಸೇವಿಸಿದ್ದು, ಈ ವೇಳೆ ಯುವತಿಗೆ ಹೆಚ್ಚು ಮದ್ಯಪಾನ ಮಾಡಿಸಿ, ಆಕೆ ನಶೆಯಲ್ಲಿದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ಬಳಿಕ ಬೆಳಗಿನ ಜಾವ ಹೋಟೆಲ್ನಿಂದ ಹೊರಬಂದ ಯುವತಿ ನೇರವಾಗಿ ಮಡಿವಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ತನಿಖೆ ಕೈಗೊಂಡು ಆರೋಪಿ ಸಮೀರ್ನನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಂಡ ನಂತರ ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.





