Published
9 months agoon
By
Akkare News
ಸಕಲೇಶಪುರ: ಕೊಲ್ಲಹಳ್ಳಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಡಗರ ಸಂಭ್ರಮದಿಂದ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತ್ತು
ಮಸೀದಿ ಖತೀಬರಾದ ಜನಾಬ್ ಬದ್ರುದ್ದಿನ್ ದಾರೀಮಿ ರವರ ನೇತ್ರತ್ವದಲ್ಲಿ ಈದ್ ನಮಾಜ್ ನಂತರ ಕುತುಬ ಹಾಗು, ಪ್ರಾರ್ಥನೆ ನಡೆಯುತು,



ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಈ ದೀನದಂದು ನಾವೇಲ್ಲರೂ ಎಲ್ಲಾ ದುಷ್ಟಚಟಗಳಿಂದ,ಎಲ್ಲಾ ದ್ವೇಷ, ಅಸೂಯೆಗಳಿಂದ ದೂರವಿದ್ದು, ಇಸ್ಲಾಂ ಧರ್ಮದ ತಾತ್ವ ಅದರ್ಶದಂತೆ ಸಜ್ಜನರಾಗಿರೋಣ ಎಂದು ಖತೀಬರಾದ ಜನಾಬ್ ಬದ್ರುದ್ದಿನ್ ದಾರಿಮಿ ಈದ್ ಸಂದೇಶವನ್ನು ನೀಡಿದರು



ಈ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿಯ ಅದ್ಯಕ್ಷರು, ರಾಜ್ಯ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾದ ಸಲೀಂ ಕೊಲ್ಲಹಳ್ಳಿ, ಮದರಸ ಗುರುಗಳಾದ ಸ್ವದೀಕ್ ಉಸ್ತಾದ್ ಮಸೀದಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಜಮಾಹತ್ ಸದಸ್ಯರು, ಯುವಕರು ಹಿರಿಯ ಕಿರಿಯರು ಭಾಗವಹಿಸಿದರು ನಂತರ ಖಬರ್ ಸ್ತಾನಕ್ಕೆ ತೆರಳಿ ಮರಣ ಹೊಂದಿರುವವರ ಮಗ್ಪಿರತ್ ಗಾಗಿ ದುವಾ ಮಾಡಲಾಯಿತು.
ವರದಿ ಅಬ್ದುಲ್ ಖಾದರ್ ಪಾಟ್ರಕೋಡಿ








