Connect with us

ಇತರ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಆರೋಪಿ ಬೆಳ್ಳಾರೆ ಗ್ರಾ.ಪಂ. ಸದಸ್ಯ ಮಹಮ್ಮದ್ ಇಕ್ಬಾಲ್ ಸದಸ್ಯತ್ವ ರದ್ದು

Published

on

ಸುಳ್ಯ: ಬಿಜೆಪಿಯ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಅವರ ಕೊಲೆ ಪ್ರಕರಣದ ಆರೋಪಿ, ಪ್ರಸ್ತುತ ಜೈಲಿ ನಲ್ಲಿರುವ ಬೆಳ್ಳಾರೆ ಗ್ರಾಮ ಪಂಚಾಯತ್‌ ಸದಸ್ಯ ಕೆ. ಮಹಮ್ಮದ್‌ ಇಕ್ಬಾಲ್‌ನ ಸದಸ್ಯತ್ವವನ್ನು ರದ್ದು ಮಾಡಲಾಗಿದೆ.

 

ಬೆಳ್ಳಾರೆ ಗ್ರಾ.ಪಂ.ನ 1ನೇ ವಾರ್ಡ್‌ ಚುನಾಯಿತ ಸದಸ್ಯ ಕೆ. ಮಹಮ್ಮದ್‌ ಇಕ್ಬಾಲ್‌ 2024-25ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆಯ ಘೋಷಣೆ ಯನ್ನು ನಿಗದಿತ ಅವಧಿಯೊಳಗೆ ದಾಖಲಿ ಸದೇ ಇರುವ ಕಾರಣ, ರಾಜ್ಯ ಚುನಾವಣ ಆಯೋಗದ ಆದೇಶದಂತೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993ರ ಪ್ರಕರಣ 43(ಬಿ)(4)ರಡಿ ಆತನನ್ನು ಗ್ರಾ.ಪಂ. ಸದಸ್ಯತ್ವದಿಂದ ತೆಗೆದುಹಾಕಿ ಹಾಗೂ ಆ ಸ್ಥಾನವು ಖಾಲಿಯಾಗಿದೆ ಎಂದು ಘೋಷಿಸಲಾಗಿದೆ.

ಈ ಬಗ್ಗೆ ಚುನಾವಣ ಆಯೋಗವು ಬೆಳ್ಳಾರೆ ಗ್ರಾ.ಪಂ.ಗೆ ಪತ್ರದ ಮೂಲಕ ಮಹಿತಿ ನೀಡಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement