Published
2 months agoon
By
Akkare News
ಕಾಣಿಯೂರು : ದಿ 18.01.2026ರ ಆದಿತ್ಯವಾರ ಪೂರ್ವಾಹ್ನ ಗಂಟೆ 8.30ರಿಂದ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಕೂಡುರಸ್ತೆ ಕಾಣಿಯೂರು ಇದರ ವತಿಯಿಂದ ಕಾಣಿಯೂರು ರೈಲ್ವೇ ನಿಲ್ದಾಣ ಮತ್ತು ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಒಳಾಂಗಣದಲ್ಲಿ ಸ್ವಚ್ಛತಾ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಮತಿ ಆಶಾ ಅಭಿಕಾರ, ಸಿಬ್ಬಂದಿ ಶ್ರೀಮತಿ ಜಿನ್ಸಿ ಮತ್ತು ರೈಲ್ವೇ ಸಿಬ್ಬಂದಿ ಶ್ರೀ ಪ್ರಥಮ್ ಸಿಂಗ್ ಮೀನಾ ಉಪಸ್ಥಿತರಿದ್ದರು.








