Published
1 month agoon
By
Akkare News
ಬೆಂಗಳೂರು ಮೂಲದ ವ್ಯಕ್ತಿಗೆ 1 ಲಕ್ಷಕ್ಕೆ ಬೇಡಿಕೆ ಇಟ್ಟು 40 ಸಾವಿರ ಹಣ ಪಡಯುವಾಗ ತುಮಕೂರು ಗ್ರಾಮಾಂತರ ಪಿಎಸ್ಐ ಚೇತನ್ ಕುಮಾರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.


ಠಾಣಾ ವ್ಯಾಪ್ತಿಯಲ್ಲಿ ಕಾರ್ ವೊಂದನ್ನು ವಶಕ್ಕೆ ಪಡೆದು, ಗಾಡಿಯಲ್ಲಿ ಅನುಮಾನಾಸ್ಪದ ವಸ್ತು ಇದೆ ಎಂದು ಠಾಣೆಗೆ ತಂದಿದ್ದ ಪಿಎಸ್ಐ. ಬಳಿಕ ಕಾರ್ ಬಿಡದೆ, ಪ್ರಕರಣ ದಾಖಲಿಸದೇ ಹಣಕ್ಕೆ ಬೇಡಿಕೆ ಇಟ್ಟಿದ್ರು. ಹಣ ಕೊಡದೆ ಇದ್ದರೆ ಗಾಂಜಾ ಕೇಸ್ ಬುಕ್ ಮಾಡುವ ಬೆದರಿಕೆ ಹಾಕಿದ್ದರು ಚೇತನ್ ಕುಮಾರ್. ಒಂದು ಲಕ್ಷಕ್ಕೆ ಬೇಡಿಕೆ ಇಟ್ಟು ಬಳಿಕ 40 ಸಾವಿರಕ್ಕೆ ಫೈನಲ್ ಮಾಡಿದ್ರು. ನಿನ್ನೆ ರಾತ್ರಿ ಹಣ ತಂದು ಕೊಡುವಾಗಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪಿಎಸ್ಐ ಚೇತನ್ ಕುಮಾರ್ ಅವರನ್ನ ವಶಕ್ಕೆ ಪಡೆಯಲಾಗಿದೆ.








