Published
5 hours agoon
By
admin
ನಾನು ಏನೇ ಆದರೂ ಸಹಜವಾದ ಹೆರಿಗೆಯೇ ಆಗಬೇಕು ಎಂದು ಬಯಸಿದ್ದೆ. ನಾನು ಆಪರೇಷನ್ ಮೂಲಕ ಹೆರಿಗೆ ಮಾಡಿಸಿಕೊಳ್ಳುವುದಕ್ಕೆ ಮಾನಸಿಕವಾಗಿ ಸಿದ್ಧಳೇ ಇರಲಿಲ್ಲ. ಏನಾದರೂ ಸರಿ ಅದು ಸಹಜ ಹೆರಿಗೆಯೇ ಆಗಿರಬೇಕು ಎಂದು ಮೊದಲೇ ನಿಶ್ಚಯಿಸಿಕೊಂಡಿದ್ದೆ ಅಂತ ಅವರು ಹೇಳಿದ್ದಾರೆ. ಹಿಂದಿನ ಕಾಲದವರು ಹೆತ್ತಿದ್ದಾರೆ. ನಾನೂ ಸಹ ನಾರ್ಮಲ್ ಆಗಿಯೇ ಮಗುವಿಗೆ ಜನ್ಮ ನೀಡುತ್ತೇನೆ ಎಂದು ಹೇಳಿದ್ದೆ. ನಮ್ಮ ಅಜ್ಜಿ ಅವರು 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಗ ಏನಾದರೂ ಕಾಂಪ್ಲಿಕೇಷನ್ ಅಂತ ಯಾವುದಾದರು ವೈದ್ಯರು ಹೇಳಿದ್ದರಾ ಅಂತ ಅಮೃತ ಅವರು ಪ್ರಶ್ನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಹೆರಿಗೆ ಅನುಭವವನ್ನು ಅವರು ತುಂಬಾ ಮುಕ್ತವಾಗಿ ಹಂಚಿಕೊಂಡಿದ್ದಾರೆ. 
‘ ನನ್ನದು ನಿಶಬ್ದದ ಹೆರಿಗೆ ಅದಕ್ಕೆ ಪ್ರಜ್ಞೆ ಬಂದರೂ ಸುಮ್ಮನಿದ್ದೆ. ಐದೇ ನಿಮಿಷದಲ್ಲಿ ಹೆರಿಗೆ ಪ್ರಕ್ರಿಯೆ ಮುಗಿದು ಹೋಯಿತು. ಸೌಂಡೇ ಇರಲಿಲ್ಲ ಅಂತ ಅವರು ಹೇಳಿದ್ದಾರೆ. ಪತಿ ರಘು ಅವರ ಕೈ ಗಟ್ಟಿಯಾಗಿ ಹಿಡಿದುಕೊಂಡಿದ್ದೆ. ರಘು ಅವರು ಒಳಗೆ ಬರಬೇಕು ಅಂತ ಕಾಯುತ್ತಿದ್ದರು. ಆದರೆ ನನಗೆ ಆಗಲೇ ಸಹಜ ಹೆರಿಗೆ ಆಗಿತ್ತು. ಪತಿ ಬಳಿ ನರ್ಸ್ ಬಂದು ನಿಮಗೆ ಹೆಣ್ಣು ಮಗು ಆಗಿದೆ ಅಂತ ಅವರಿಗೆ ಹೇಳಿದ್ದಾರೆ.
ಇದನ್ನೆಲ್ಲ ನೋಡಿದ ನನಗೆ ಹೆರಿಗೆ ಮಾಡಿಸಿದ ವೈದ್ಯರು ಈ ರೀತಿ ಇದ್ದರೆ ದಿನಕ್ಕೆ 10 ರಿಂದ 15 ಹೆರಿಗೆ ಮಾಡಿಸಬಹುದು ಅಂತ ಹೇಳಿದ್ರು ಅಂತ ನಟಿ ಅಮೃತ ಅವರು ಹೇಳಿಕೊಂಡಿದ್ದಾರೆ. ಹೆರಿಗೆಯ ಬಗ್ಗೆ ಇಷ್ಟೊಂದು ಮುಕ್ತವಾಗಿ ಮಾತನಾಡಿರುವುದಕ್ಕೆ ನಟಿ ಅಮೃತ ಅವರ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 


