Connect with us

ಇತರ

ನಮ್ಮ ಅಜ್ಜಿ 10 ಮಕ್ಕಳನ್ನ ಹೆತ್ತಿದ್ದಾರೆ ನನಗೆ ಒಂದು ಮಗು ಹೆರುವುದಕ್ಕೆ ಆಗಲ್ವಾ: ನಟಿ ಅಮೃತ ರಾಮಮೂರ್ತಿ ಬೋಲ್ಡ್‌ ಮಾತು ವೈರಲ್

Published

on

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಆಸೆ ಸೀರಿಯಲ್ ಖ್ಯಾತಿಯ ಅಮೃತ ರಾಮಮೂರ್ತಿ ಅವರು ಮಕ್ಕಳನ್ನು ಹೆರುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹಳೆಯ ಕಾಲದಲ್ಲಿ ಜನರು ನಾರ್ಮಲ್ ಹೆರಿಗೆ ಮಾಡಿಸಿಕೊಳ್ಳುತ್ತಿದ್ದರು ಮತ್ತು ಅದು ಸಹಜ ಸಹ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಿಜೇರಿಯನ್ (ಆಪರೇಷನ್ ಮೂಲಕ ಹೆರಿಗೆ ಮಾಡಿಸುವುದು) ಸಹಜ ಎನ್ನುವಂತೆ ಬದಲಾಗಿದೆ ಎಂದು ಹೇಳಿದ್ದಾರೆ. Newsonewsu ಯೂಟ್ಯೂಬ್ ಚಾನೆಲ್‌ಗೆ ಕೊಟ್ಟ ಸಂದರ್ಶನದಲ್ಲಿ ಅಮೃತ ಅವರು ಹೆರಿಗೆ ಹಾಗೂ ಹೆಣ್ಣು ಮಕ್ಕಳ ಕಷ್ಟಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾನು ಏನೇ ಆದರೂ ಸಹಜವಾದ ಹೆರಿಗೆಯೇ ಆಗಬೇಕು ಎಂದು ಬಯಸಿದ್ದೆ. ನಾನು ಆಪರೇಷನ್ ಮೂಲಕ ಹೆರಿಗೆ ಮಾಡಿಸಿಕೊಳ್ಳುವುದಕ್ಕೆ ಮಾನಸಿಕವಾಗಿ ಸಿದ್ಧಳೇ ಇರಲಿಲ್ಲ. ಏನಾದರೂ ಸರಿ ಅದು ಸಹಜ ಹೆರಿಗೆಯೇ ಆಗಿರಬೇಕು ಎಂದು ಮೊದಲೇ ನಿಶ್ಚಯಿಸಿಕೊಂಡಿದ್ದೆ ಅಂತ ಅವರು ಹೇಳಿದ್ದಾರೆ. ಹಿಂದಿನ ಕಾಲದವರು ಹೆತ್ತಿದ್ದಾರೆ. ನಾನೂ ಸಹ ನಾರ್ಮಲ್ ಆಗಿಯೇ ಮಗುವಿಗೆ ಜನ್ಮ ನೀಡುತ್ತೇನೆ ಎಂದು ಹೇಳಿದ್ದೆ. ನಮ್ಮ ಅಜ್ಜಿ ಅವರು 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಗ ಏನಾದರೂ ಕಾಂಪ್ಲಿಕೇಷನ್ ಅಂತ ಯಾವುದಾದರು ವೈದ್ಯರು ಹೇಳಿದ್ದರಾ ಅಂತ ಅಮೃತ ಅವರು ಪ್ರಶ್ನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಹೆರಿಗೆ ಅನುಭವವನ್ನು ಅವರು ತುಂಬಾ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ನಮ್ಮ ಅಜ್ಜಿ 10 ಮಕ್ಕಳಿಗೆ ಸಾಮಾನ್ಯ ಹೆರಿಗೆ ಪದ್ಧತಿಯ ಮೂಲಕ ಜನ್ಮ ನೀಡಿರುವಾಗ ನನಗೆ ಒಂದು ಮಗುವಿಗೆ ಜನ್ಮ ನೀಡುವುದಕ್ಕೆ ಸಾಧ್ಯವಿಲ್ಲವಾ ಎಂದು ಅವರು ಪ್ರಶ್ನಿಸಿದ್ದಾರೆ. ವೈದ್ಯರು ನೀವು ನೋವು ತಡಿಯುವುದಿಲ್ಲ ಎಂದು ಹೇಳಿದರು, ನಾನು ಹೇಳಿದೆ.. ನಾನು ನೋವು ತಡಿಯಬಲ್ಲ ಅದನ್ನು ವೈದ್ಯರು ಹೇಗೆ ನಿರ್ಧರಿಸಲು ಸಾಧ್ಯ ಎಂದು ನಾನು ಕೇಳಿದೆ. ನನಗೆ ಹೆರಿಗೆ ಆಗಿರುವುದು ಇಡೀ ಆಸ್ಪತ್ರೆಯಲ್ಲೇ ಯಾರಿಗೂ ಗೊತ್ತಿಲ್ಲ. ಅಷ್ಟೊಂದು ನಿಶಬ್ದವಾಗಿ ಹೆರಿಗೆ ಆಯಿತು. ಎಷ್ಟೋ ನೋವು ಬಂದರೂ ನಾನು ಕಿರುಚಿಕೊಳ್ಳಲಿಲ್ಲ. ಎಲ್ಲಿ ಸಿಜೇರಿಯನ್ ಮಾಡಿಸಿಬಿಡುತ್ತಾರೋ ಎನ್ನುವ ಆತಂಕ ನನಗಿತ್ತು.   ‘ ನನ್ನದು ನಿಶಬ್ದದ ಹೆರಿಗೆ ಅದಕ್ಕೆ ಪ್ರಜ್ಞೆ ಬಂದರೂ ಸುಮ್ಮನಿದ್ದೆ. ಐದೇ ನಿಮಿಷದಲ್ಲಿ ಹೆರಿಗೆ ಪ್ರಕ್ರಿಯೆ ಮುಗಿದು ಹೋಯಿತು. ಸೌಂಡೇ ಇರಲಿಲ್ಲ ಅಂತ ಅವರು ಹೇಳಿದ್ದಾರೆ. ಪತಿ ರಘು ಅವರ ಕೈ ಗಟ್ಟಿಯಾಗಿ ಹಿಡಿದುಕೊಂಡಿದ್ದೆ. ರಘು ಅವರು ಒಳಗೆ ಬರಬೇಕು ಅಂತ ಕಾಯುತ್ತಿದ್ದರು. ಆದರೆ ನನಗೆ ಆಗಲೇ ಸಹಜ ಹೆರಿಗೆ ಆಗಿತ್ತು. ಪತಿ ಬಳಿ ನರ್ಸ್ ಬಂದು ನಿಮಗೆ ಹೆಣ್ಣು ಮಗು ಆಗಿದೆ ಅಂತ ಅವರಿಗೆ ಹೇಳಿದ್ದಾರೆ. ಇದನ್ನೆಲ್ಲ ನೋಡಿದ ನನಗೆ ಹೆರಿಗೆ ಮಾಡಿಸಿದ ವೈದ್ಯರು ಈ ರೀತಿ ಇದ್ದರೆ ದಿನಕ್ಕೆ 10 ರಿಂದ 15 ಹೆರಿಗೆ ಮಾಡಿಸಬಹುದು ಅಂತ ಹೇಳಿದ್ರು ಅಂತ ನಟಿ ಅಮೃತ ಅವರು ಹೇಳಿಕೊಂಡಿದ್ದಾರೆ. ಹೆರಿಗೆಯ ಬಗ್ಗೆ ಇಷ್ಟೊಂದು ಮುಕ್ತವಾಗಿ ಮಾತನಾಡಿರುವುದಕ್ಕೆ ನಟಿ ಅಮೃತ ಅವರ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version