ಕಲಬುರಗಿ: ಕಲಬುರಗಿ ನಗರದ ನೂತನ ಉಪ ಪೊಲೀಸ್ ಆಯುಕ್ತರಾಗಿ (ಕಾನೂನು ಹಾಗೂ ಸುವ್ಯವಸ್ಥೆ) ಯುವ ಮಹಿಳಾ ಐಪಿಎಸ್ ಅಧಿಕಾರಿ ಶಾಲೂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಕೇಡರ್‌ನ 2021 ಬ್ಯಾಚ್‌ನ ಶಾಲೂ ಅವರು ಹೊಳೆನರಸೀಪುರದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್‌ಪಿ) ಸೇವೆ ಸಲ್ಲಿಸಿ, ನಂತರ ಅಪರಾಧ ತನಿಖಾ ಇಲಾಖೆ (ಸಿಐಡಿ) ವಿಶೇಷ ವಿಚಾರಣಾ ವಿಭಾಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ಬಡ್ತಿ ಪಡೆದಿದ್ದರು.
ಈ ಹಿಂದೆ ಡಿಸಿಪಿಯಾಗಿದ್ದ ಕರ್ನಾಟಕ ಕೇಡರ್‌ನ 2018 ರ ಬ್ಯಾಚ್‌ನ ಕನಿಕಾ ಸಿಕ್ರಿವಾಲ್ ಅವರು ಇತ್ತೀಚೆಗೆ ಕೋಲಾರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಹೊಂದಿದ್ದ ಬೆನ್ನಲ್ಲೇ ಈ ಹುದ್ದೆ ಖಾಲಿಯಾಗಿತ್ತು. ಇದೀಗ ಅವರ ಸ್ಥಾನಕ್ಕೆ ಮತ್ತೋರ್ವ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ನೇಮಕ ಮಾಡುವ ಮೂಲಕ ಸರ್ಕಾರ ಗಮನ ಸೆಳೆದಿದೆ. ‘