Published
12 hours agoon
By
Akkare News


‘ಆರ್ಸಿಬಿಗೆ ನಮ್ಮ ಸಂಪೂರ್ಣ ಬೆಂಬಲವಿದೆ’ ಪಂದ್ಯದ ಸ್ಥಳ ಬದಲಾವಣೆಯ ಕುರಿತು ಅಸಮಾಧಾನವಿದ್ದರೂ ಆರ್ಸಿಬಿ ತಂಡದ ಪ್ರದರ್ಶನವನ್ನು ಡಿ.ಕೆ.ಶಿವಕುಮಾರ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಕಳೆದ ಸೀಸನ್ನಲ್ಲಿಯೂ ಆರ್ಸಿಬಿ ಅದ್ಭುತವಾಗಿ ಆಡಿ ಗೆದ್ದಿತ್ತು. ಈ ವರ್ಷವೂ ಕೂಡ ಆಟಗಾರರು ಅದ್ಭುತ ಹೋರಾಟದ ಮೂಲಕ ಫೈನಲ್ ತಲುಪಿದ್ದಾರೆ. ಪಂದ್ಯದ ಸ್ಥಳವನ್ನು ಬದಲಾಯಿಸಿ ನಮಗೆ ಅನ್ಯಾಯ ಮಾಡಿರಬಹುದು, ಆದರೆ ನಮ್ಮ ತಂಡದ ಹೋರಾಟದ ಕಿಚ್ಚನ್ನು ಕಮ್ಮಿ ಮಾಡಲು ಸಾಧ್ಯವಿಲ್ಲ. ಒಬ್ಬ ನಾಯಕ ಯಾವಾಗಲೂ ನಾಯಕನೇ. ಆರ್ಸಿಬಿ ಆಟಗಾರರು ಮೈದಾನದಲ್ಲಿ ಸಿಂಹದಂತೆ ಹೋರಾಡಿದ್ದಾರೆ,’ ಎಂದು ಶ್ಲಾಘಿಸಿದರು.
‘ಕರ್ನಾಟಕ ಸರ್ಕಾರದ ಪರವಾಗಿ, ರಾಜ್ಯದ ಕೋಟ್ಯಂತರ ಆರ್ಸಿಬಿ ಅಭಿಮಾನಿಗಳ ಪರವಾಗಿ ನಾನು ಇಡೀ ತಂಡಕ್ಕೆ ಹೃದಯಪೂರ್ವಕ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ. ಈ ಬಾರಿಯೂ ನಮ್ಮ ತಂಡಕ್ಕೆ ಜಯ ಸಿಗಲಿ ಎಂದು ಆಶಿಸುತ್ತೇನೆ,’ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು. 

