Published
15 hours agoon
By
Akkare News
ಜುಲೈ 2 ರಿಂದ 5ರವರೆಗೆ ಕಿಲ್ಲೆ ಮೈದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು – ಮಕ್ಕಳಿಗಾಗಿ ವಿಶೇಷ ಫನ್ ಝೋನ್ ಆಕರ್ಷಣೆ ಪುತ್ತೂರು: ಸಾಮಾಜಿಕ ಸೇವಾ ಸಂಘಟನೆಯಾದ ಪುತ್ತೂರು ವಾರಿಯರ್ಸ್ ಹಾಗೂ ಸುದ್ದಿ ಅಡ್ವೆರ್ಟೈಸರ್ಸ್ ಇವರ ಸಹಯೋಗದಲ್ಲಿ, ಸ್ಪೂರ್ತಿ ಕ್ಯಾಟರಿಂಗ್ ಸರ್ವಿಸ್ ಮತ್ತು ಇವೆಂಟ್ ಆರ್ಗನೈಸರ್ ಅವರ ಸಹಕಾರದೊಂದಿಗೆ ಇದೇ ಮೊದಲ ಬಾರಿಗೆ “ಪುತ್ತೂರು ಹಬ್ಬ – ಮಾವು, ಹಲಸು, ಸಸ್ಯ ಜಾತ್ರೆ ಮತ್ತು ಫುಡ್ ಫೆಸ್ಟಿವಲ್ – 2026” ಅನ್ನು ಜುಲೈ 2, 3, 4 ಹಾಗೂ 5 ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ.

ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಕೃಷಿ, ತೋಟಗಾರಿಕೆ, ಆಹಾರ ಸಂಸ್ಕೃತಿ ಹಾಗೂ ಮನರಂಜನೆಯನ್ನು ಒಂದೇ ವೇದಿಕೆಯಲ್ಲಿ ಅನುಭವಿಸುವ ಅಪೂರ್ವ ಅವಕಾಶ ಸಾರ್ವಜನಿಕರಿಗೆ ದೊರೆಯಲಿದೆ. 
ಪುತ್ತೂರು ಹಬ್ಬದಲ್ಲಿ ವಿವಿಧ ತಳಿಯ ಮಾವು ಹಾಗೂ ಹಲಸಿನ ಹಣ್ಣುಗಳು, ಅಪರೂಪದ ಸಸ್ಯಗಳು, ಹೂಗಿಡಗಳು, ಅಲಂಕಾರಿಕ ಗಿಡಗಳು, ಹಣ್ಣಿನ ಗಿಡಗಳು, ಮನೆ ತೋಟಕ್ಕೆ ಅಗತ್ಯವಾದ ಸಸ್ಯಗಳು ಸೇರಿದಂತೆ ವೈವಿಧ್ಯಮಯ ಮಳಿಗೆಗಳು ಇರಲಿವೆ. ಇದರ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಆಹಾರ ಮಳಿಗೆಗಳಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಖಾದ್ಯಗಳು, ಬೀದಿ ಆಹಾರಗಳು, ಸ್ಥಳೀಯ ವಿಶೇಷ ತಿನಿಸುಗಳು ಹಾಗೂ ವಿವಿಧ ರುಚಿಕರ ಆಹಾರ ಪದಾರ್ಥಗಳು ಲಭ್ಯವಾಗಲಿವೆ. 





