Published
14 hours agoon
By
Akkare News
ಕಾರವಾರದಿಂದ ಉಡುಪಿ ಕಡೆಗೆ ಸಚಿವರನ್ನು ಎಸ್ಕಾರ್ಟ್ ಮಾಡಿಕೊಂಡು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಸಚಿವರ ಮಾನವೀಯತೆ, ಚಾಲಕನ ಸಮಯಪ್ರಜ್ಞೆ ಅಪಘಾತ ಸಂಭವಿಸಿದ ತಕ್ಷಣ ಸಚಿವ ಯು.ಟಿ. ಖಾದರ್ ಅವರು ಮಾನವೀಯತೆ ಮೆರೆದಿದ್ದು, ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡು ಚಿಕಿತ್ಸೆಗೆ ಸ್ಪಂದಿಸಿದ್ದಾರೆ.
ಚಾಲಕನಿಗೆ ಸಚಿವರ ಪ್ರಶಂಸೆ: ದಾರಿಯಲ್ಲಿ ಬಂದ ಸ್ಕೂಟರ್ ನೇರವಾಗಿ ಡಿಕ್ಕಿಯಾಗುವುದನ್ನು ತಪ್ಪಿಸಲು ಬೆಂಗಾವಲು ವಾಹನದ ಚಾಲಕ ಅತ್ಯಂತ ಸಮಯಪ್ರಜ್ಞೆಯಿಂದ ವಾಹನವನ್ನು ನಿಯಂತ್ರಿಸಿ ಪಕ್ಕಕ್ಕೆ ಸರಿಸಿದ್ದಾನೆ. ಒಂದು ವೇಳೆ ಚಾಲಕ ವಾಹನವನ್ನು ನಿಯಂತ್ರಿಸದೇ ಇದ್ದಿದ್ದರೆ ಸ್ಕೂಟರ್ ಸವಾರನ ಜೀವಕ್ಕೆ ಕುತ್ತು ಬರುವ ಸಾಧ್ಯತೆಯಿತ್ತು. ಚಾಲಕನ ಈ ಚಾಕಚಕ್ಯತೆಯಿಂದಾಗಿ ಸವಾರನ ಜೀವ ರಕ್ಷಣೆಯಾಗಿದ್ದು, ಸಚಿವ ಯು.ಟಿ. ಖಾದರ್ ಅವರು ತಮ್ಮ ಬೆಂಗಾವಲು ವಾಹನದ ಚಾಲಕನನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಗಾಯಾಳು ಪ್ರಾಣಾಪಾಯದಿಂದ ಪಾರು ಅಪಘಾತದಲ್ಲಿ ಅಂಕೋಲ ತಾಲೂಕಿನ ಅಲಗೇರಿ ಗ್ರಾಮದ ನಿವಾಸಿ ಸಂದೀಪ್ ನಾಯಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಅಂಕೋಲ ಪಟ್ಟಣದ ಆರ್ಯ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ಪೆಟ್ಟಾಗಿದ್ದರೂ ಸದ್ಯ ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.






