Published
3 hours agoon
By
Akkare News

ಅರಂತೋಡಿನಲ್ಲಿ ನನ್ನ ಹೆಸರಿನಲ್ಲಿರುವ ಆಸ್ತಿ ಮತ್ತು ಸೊತ್ತಿನ ವ್ಯವಹಾರದಲ್ಲಿ ಅವರು ಅವ್ಯವಹಾರ ಮಾಡಿದ್ದಾರೆ ಎಂದು ಹೇಳಿದ ಅವರು ಅದಕ್ಕೆ ಪೂರಕವಾಗಿರುವ ಹಲವು ತೆಕ್ಕಿಲ್ ಗ್ಯಾಸ್ ಏಜೆನ್ಸಿ ನನ್ನ ಹೆಸರಿನಲ್ಲಿ ಇದ್ದು , ಈ ವರೆಗೆ ಅದರ ಯಾವುದೇ ಲಾಭಾಂಶವನ್ನು ನನಗೆ ಅವರು ನೀಡಿಲ್ಲ. ಅಲ್ಲದೆ ನನ್ನ ಹೆಸರಿನಲ್ಲಿ ಇರುವ ಜಾಗದ ಕಟ್ಟಡದಿಂದ ಬರಬೇಕಾದ ಬಾಡಿಗೆ ಹಣವನ್ನು ಕೂಡ ನನಗೆ ಸರಿಯಾಗಿ ನೀಡುತ್ತಿಲ್ಲ. ಇದರ ಬಗ್ಗೆ ದೊಡ್ಡ ದೊಡ್ಡ ರಾಜಕಾರಣಿಗಳ ಮೂಲಕ ಮಾತುಕತೆ ಮಾಡಿದ್ದು 75 ಲಕ್ಷ ರೂ. ಕೊಡುವುದಾಗಿ ಒಂದು ಅವರು ಹೇಳಿದ್ದರು. ಆದರೆ ಅದರಲ್ಲಿ ರೂ 25 ಲಕ್ಷಗಳನ್ನು ಮಾತ್ರ ಕೊಟ್ಟಿದ್ದು ಬಾಕಿ ಇರುವ ಮೊತ್ತವನ್ನು ಇನ್ನೂ ಕೊಟ್ಟಿಲ್ಲ. ಚಿನ್ನದ ರೇಟ್ ಈಗಿನ ಕಾಲಕ್ಕೆ ಹೋಲಿಸಿದರೆ ಈಗ ಒಂದು ಕೋಟಿಗೂ ಹೆಚ್ಚು ಹಣ ಚಿನ್ನದಲ್ಲಿ ಕೊಡಬೇಕು. ಇದೀಗ ಅವರು ಅದನ್ನು ನೀಡಲು ಒಪ್ಪುತ್ತಿಲ್ಲ. ನನಗೆ ನನ್ನ ಮಕ್ಕಳ ಶಿಕ್ಷಣ ಮತ್ತು ನಮ್ಮ ಜೀವನದ ನಿರ್ವಹಣೆ ಕಷ್ಟಕರವಾಗಿದ್ದು ನನಗೆ ನ್ಯಾಯ ಸಿಗಬೇಕು. ಈ ಬಗ್ಗೆ ಮಾತನಾಡಿದರೆ, ನಿನಗೆ ಏನು ಮಾಡಲೂ ಸಾಧ್ಯವಿಲ್ಲ. ನೀನು ಏನು ಬೇಕಾದರೂ ಮಾಡು. ನಾನು ಹೆದರುವುದಿಲ್ಲ ” ಎಂದು ನನ್ನನ್ನು ಭಯಪಡಿಸುತ್ತಿದ್ದಾರೆ. ಆದ್ದರಿಂದ ನನಗೆ ನ್ಯಾಯ ದೊರಕಿಸಿಕೊಡಬೇಕು ” ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು









