Published
4 hours agoon
By
Akkare News

ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 45 ವರ್ಷ ವಯೋಮಿತಿಯೊಳಗಿರಬೇಕು. ತರಬೇತಿಯ ಅವಧಿ 30 ದಿನಗಳು ಆಗಿದ್ದು, ಸುರಕ್ಷಿತ ಹಾಗೂ ಕೌಶಲ್ಯಾಧಾರಿತ ಚಾಲನಾ ತರಬೇತಿ ನೀಡಲಾಗುತ್ತದೆ.ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 20 ರಿಂದ 45 ವರ್ಷ ವಯೋಮಿತಿ ನಿಗದಿಯಾಗಿದೆ. ಜೊತೆಗೆ, ಅಭ್ಯರ್ಥಿಗಳು ಕನಿಷ್ಠ ಒಂದು ವರ್ಷದ ಹಳೆಯ LMV ಚಾಲನಾ ಪರವಾನಗಿ ಹೊಂದಿರಬೇಕು. ಈ ತರಬೇತಿಯ ಅವಧಿಯೂ 30 ದಿನಗಳು ಆಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಅಭ್ಯರ್ಥಿಗಳು ಕೆಎಸ್ಆರ್ಟಿಸಿಯ ಅಧಿಕೃತ ಉದ್ಯೋಗ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಸೌಲಭ್ಯ ಇಲ್ಲದವರು ತಮ್ಮ ಸಮೀಪದ ಕೆಎಸ್ಆರ್ಟಿಸಿ ಚಾಲನಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.ಈ ಯೋಜನೆಯ ಮೂಲಕ ಉದ್ಯೋಗವಿಲ್ಲದ SC/ST ಯುವಕರಿಗೆ ಚಾಲನಾ ಕೌಶಲ್ಯ ಬೆಳೆಸಿ ಸ್ವಯಂ ಉದ್ಯೋಗ ಅಥವಾ ಚಾಲಕರಾಗಿ ಉದ್ಯೋಗ ಪಡೆಯಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಸರ್ಕಾರದ ಈ ಸೌಲಭ್ಯದ ಪ್ರಯೋಜನ ಪಡೆಯುವಂತೆ ಕೆಎಸ್ಆರ್ಟಿಸಿ ಮನವಿ ಮಾಡಿದೆ.
ಅರ್ಹ ಮತ್ತು ಆಸಕ್ತ ಯುವಕ-ಯುವತಿಯರು ನಿಗಮದ ಅಧಿಕೃತ ಉದ್ಯೋಗ ವೆಬ್ಸೈಟ್ ಆದ www.ksrtcjobs.karnataka.gov.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಆನ್ಲೈನ್ ಸೌಲಭ್ಯವಿಲ್ಲದವರು ತಮ್ಮ ಹತ್ತಿರದ ಕೆಎಸ್ಆರ್ಟಿಸಿ ತರಬೇತಿ ಕೇಂದ್ರಗಳಿಗೆ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.