Published
11 hours agoon
By
Akkare News
ಪುತ್ತೂರು: ಇಲ್ಲಿನ ಏಳ್ಮುಡಿಯಲ್ಲಿರುವ ತಾಜ್ ಟವರ್ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಸೆ.25ರಿಂದ ಅ.10ರ ವರೆಗೆ ನಡೆಯಲಿರುವ ‘ವಿಶ್ವ ವಜ್ರ-ಡೈಮಂಡ್ ಎಕ್ಸಿಬಿಷನ್’ ವಜ್ರಾಭರಣಗಳ ಪ್ರದರ್ಶನಕ್ಕೆ ಸೆ.25ರಂದು ಸಂಜೆ ಚಾಲನೆ ನೀಡಲಾಯಿತು..
ವಜ್ರಾಭರಣಗಳ ಪ್ರದರ್ಶನವನ್ನು ಉದ್ಘಾಟಿಸಿದ ಡಯಾಕೇರ್ ಸ್ಪೆಷಾಲಿಟಿ ಕ್ಲಿನಿಕ್ನ ವೈದ್ಯೆ ಡಾ.ಹಬೀನಾ ಮಾತನಾಡಿ ಡೈಮಂಡ್ ಅಥವಾ ಚಿನ್ನ ಅದೊಂದು ಆಕರ್ಷಣೀಯ ಆಭರಣ ಮಾತ್ರವಲ್ಲ, ಬದಲಾಗಿ ಮಹಿಳೆಯ ಗೌರವವೂ ಆಗಿದ್ದು ಆಭರಗಳಲ್ಲಿ ಭಾವನಾತ್ಮಕ ವಿಚಾರಗಳೂ ಅಡಗಿದೆ ಎಂದು ಹೇಳಿದರು. ಸುಲ್ತಾನ್ ಡೈಮಂಡ್ ಗೋಲ್ಡ್ ಮಳಿಗೆಯಲ್ಲಿ ಅಭರಣಗಳ ಸಂಗ್ರಹವು ಬಹಳ ಚೆನ್ನಾಗಿದ್ದು ಅದ್ಭುತವಾಗಿದೆ, ಇಲ್ಲಿನ ಸಿಬ್ಬಂದಿಗಳ ಸೇವೆಯೂ ಉತ್ತಮವಾಗಿದ್ದು ಗ್ರಾಹಕರಿಗೆ ಸಂತೃಪ್ತಿಯನ್ನು ನೀಡುವಂತಿದೆ, ಇದು ಭವಿಷ್ಯದಲ್ಲಿ ಇನ್ನಷ್ಟು ಹೆಸರು ಪಡೆಯಲಿ ಎಂದು ಹಾರೈಸಿದರು. 
ಡ್ಯಾಶ್ ಮಾರ್ಕೆಟಿಂಗ್ ಕಂಪೆನಿಯ ಎಂ.ಡಿ ನಳಿನಿ ಪಿ ಶೆಟ್ಟಿ ಮಾತನಾಡಿ ಸುಲ್ತಾನ್ ಡೈಮಂಡ್ ಗೋಲ್ಡ್ ಸಂಸ್ಥೆಯು ಗ್ರಾಹಕರ ವಿಶ್ವಾಸಾರ್ಹ ಮಳಿಗೆಯಾಗಿದ್ದು ಗ್ರಾಹಕರು ಈ ಸಂಸ್ಥೆಗೆ ಹೆಚ್ಚಿನ ಬೆಂಬಲ ನೀಡಬೇಕು. ಆ ಮೂಲಕ ಸುಲ್ತಾನ್ ಗೋಲ್ಡ್ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಶುಭ ಹಾರೈಸಿದರು. 


