Published
16 hours agoon
By
Akkare News
ಪುತ್ತೂರು: ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಕಲ್ಲಾರೆಯಲ್ಲಿ ಸೆ.26 ಮತ್ತು 27ರಂದು ನಡೆದ ಕಾರ್ಯಕ್ರಮದಲ್ಲಿ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಭುವಿಕಾ ಆರ್.ಪಿ. ಅವರು 30 ಗಂಟೆ ಕಣ್ಣಿಗೆ ಬಟ್ಟೆ ಕಟ್ಟಿ ಸ್ಯಾಂಡ್ ಆರ್ಟ್ ಮಾಡುವ ಮೂಲಕ ಗಾಂಧಾರಿ ವಿದ್ಯೆಯೊಂದಿಗೆ ನಿರಂತರ 500 ಕ್ಕಿಂತ ಅಧಿಕ ಮರಳಿನ ಚಿತ್ರ ಬಿಡಿಸುವ ಮೂಲಕ ನೂತನ ದಾಖಲೆಯೊಂದಿಗೆ 30 ಗಂಟೆಯ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
ಕಲ್ಲಾರೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ಆರು ತಿಂಗಳ ಅವಧಿಯಲ್ಲಿ ಗಾಂಧಾರಿ ವಿದ್ಯೆ ಮತ್ತು ಸ್ಯಾಂಡ್ ಆರ್ಟ್ನ್ನು ಅಧ್ಯಯನ ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಈಕೆ ನೈತ್ತಾಡಿ ನಿವಾಸಿ ರಮ್ಯ ರಘು ಪೂಜಾರಿ ಅವರ ಪುತ್ರಿ. ಬಾಲ ಪ್ರತಿಭೆಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.




