Connect with us

ಇತರ

ಬೈಕ್ ಸವಾರರಿಗೆ ಬಿಗ್ ಅಲರ್ಟ್! ಹಾಫ್​ ಹೆಲ್ಮೆಟ್‌ ಸಂಪೂರ್ಣ ಬ್ಯಾನ್ ಮಾಡಿದ ಸರ್ಕಾರ

Published

on

ಬೆಂಗಳೂರು:ರಾಜ್ಯ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ದ್ವಿಚಕ್ರ ವಾಹನ ಸವಾರರಿಗೆ ಹಾಫ್ ಹೆಲ್ಮೆಟ್‌  ಸಂಪೂರ್ಣ ನಿರ್ಬಂಧ ವಿಧಿಸಿದೆ. ಅಸುರಕ್ಷಿತ ಹಾಫ್ ಹೆಲ್ಮೆಟ್ ಉತ್ಪಾದನೆ ತಡೆಯಲು ಮುಂದಾಗಿರುವ ಸರ್ಕಾರ, ಹಾಫ್ ಹೆಲ್ಮೆಟ್ ತಯಾರಿಕೆಗೆ ನಿಷೇಧಿಸಲು ಸಹ ನಿರ್ಧಾರ ಮಾಡಿದೆ. ಈ ಬಗ್ಗೆ ಸಾರಿಗೆ ಸಚಿವ ಬೈರತಿ ಸುರೇಶ್ (ಬೈರಾತಿ ಸುರೇಶ ) ಮಾಹಿತಿ ನೀಡಿದ್ದು, ಹಾಫ್ ಹೆಲ್ಮೆಟ್ ತಯಾರಿಸುವ ಎಲ್ಲಾ ಕಾರ್ಖಾನೆಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಸಾರಿಗೆ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ನಾಲ್ಕು ಬಾರಿ ಡೀಸೆಲ್ ದರ ಏರಿಕೆ ಮಾಡಿದೆ. ದರ ಏರಿಸುವುದು ಅಗತ್ಯವಾಗಿದೆ. ವರದಿ ಸಿದ್ಧಪಡಿಸಲು ಹೇಳಿದ್ದೆವು. ನಾಳೆ ನಾಡಿದ್ದು ವರದಿ ಸಲ್ಲಿಕೆಯಾಗಲಿದೆ. ವರದಿ ನೋಡುತ್ತೇನೆ, ವರದಿ ನೋಡಿ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ದಸರಾದ ಒಳಗೆ ಆಗುತ್ತಾ ಅನ್ನೋದು ಗೊತ್ತಿಲ್ಲ. ಮೊದಲು ವರದಿ ಸಲ್ಲಿಕೆಯಾಗಲಿ. ಏನೇನಿದೆ ನೋಡಿ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಮುಂದುವರೆದು ಮಾತನಾಡಿದ ಸಚಿವರು, ಸಾರಿಗೆ ವ್ಯವಸ್ಥೆ ಲಾಭದ ಸಂಸ್ಥೆಯಲ್ಲ. ಜನಸೇವೆ ಇಲಾಖೆ ಸರ್ಕಾರವೇ ಇಲ್ಲಿಗೆ ಕೊಟ್ಟು ಅಭ್ಯಾಸ. ವಿಪಕ್ಷ ಇದ್ದಾಗ ಲಾಭದಲ್ಲಿತ್ತ ಇಲಾಖೆ? ಆರ್. ಅಶೋಕ್ ಕೂಡ ಸಾರಿಗೆ ಸಚಿವರಾಗಿದ್ದರು. ಆಗ ಎಷ್ಟು ಲಾಭ ಮಾಡಿತ್ತು? ವಿರೋಧ ಪಕ್ಷದವರ ರೀತಿ ಹುಚ್ಚುಚ್ಚಾಗಿ ಮಾತನಾಡಿದರೆ ಮನೆಯಲ್ಲಿರಬೇಕಾಗುತ್ತೆ. ದರ ಏರಿಕೆಯಿಂದ ಸ್ವಲ್ಪ ಪ್ರಮಾಣದಲ್ಲಿ ನಷ್ಟ ತಗ್ಗಿಸಬಹುದು ಎಂದು ಹೇಳಿದರು. ಕಂಡಕ್ಟರ್ ಜೊತೆ ಜಗಳ ಆಡುತ್ತಿದ್ದಾರೆ ಇನ್ನು, ಇದೇ ವೇಳೆ ಸಚಿವ ಬೈರತಿ ಸುರೇಶ್​ ಶಕ್ತಿ ಕಾರ್ಡ್ ವಿಚಾರದ ಬಗ್ಗೆ ಮಾತನಾಡಿ, ಬೇರೆ ರಾಜ್ಯದವರು ನಾವು ಹೆಣ್ಣುಮಕ್ಕಳು ಅಂತ ಕಂಡಕ್ಟರ್ ಜೊತೆ ಜಗಳ ಆಡುತ್ತಿದ್ದಾರೆ. ನಮ್ಮ ಸರ್ಕಾರ ರಾಜ್ಯದ ಹೆಣ್ಣು ಮಕ್ಕಳಿಗೆ ಮಾಡಿರೋದು. ಕಳೆದ ಕ್ಯಾಬಿನೆಟ್‌ನಲ್ಲಿ 200 ಕೋಟಿ ಹಣ ಕೊಟ್ಟು 1 ಕೋಟಿ ಕಾರ್ಡ್ ಕೊಡುತ್ತಿದ್ದೇವೆ. 2 ಕೋಟಿ ಕಾರ್ಡ್ ಬೇಕು, 1 ಕೋಟಿಗೆ ಟೆಂಡರ್ ಕರೆದಿದ್ದೇವೆ, 15 ದಿನದಲ್ಲಿ ಟೆಂಡರ್ ಫೈನಲ್ ಆಗಿ, 2 ತಿಂಗಳಲ್ಲಿ ಕೊಡಲಿದ್ದೇವೆ. ಹಂತ ಹಂತವಾಗಿ ಇಡೀ ರಾಜ್ಯಕ್ಕೆ ಹಂಚುತ್ತೇವೆ ಎಂಬ ಮಾಹಿತಿ ತಿಳಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement