Published
2 hours agoon
By
Akkare News
ಕಡಬ ಬಿಲ್ಲವ ಸಂಘ, ಬಿಲ್ಲವ ಮಹಿಳಾ ವೇದಿಕೆ ಹಾಗೂ ಬಿಲ್ಲವ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯದ್ ಮೀರಾ ಸಾಹೇಬ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಗುರುಪೂಜೆ ಸಂದರ್ಭ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸದಾ ಭಾಗವಹಿಸುತ್ತಾ ಸರ್ವಧರ್ಮೀಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಯ್ಯದ್ ಮೀರಾ ಸಾಹೇಬ್ ಅವರ ಸೇವೆಯನ್ನು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ಲಾಘಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆ. ಐತ್ತೂರು, ಉಪಾಧ್ಯಕ್ಷೆ ಗೀತಾ ಉಂಡಿಲ, ಕಾರ್ಯದರ್ಶಿ ಮಿಥುನ್ ಸುಂದರ್ ಪಲ್ಲತ್ತಡ್ಕ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮೀಶ್ ಬಂಗೇರ ಪೆಲತ್ತೊಡಿ ಹಾಗೂ ಕೃಷ್ಣಪ್ಪ ಅಮೈ, ಪುತ್ತೂರು ನಾರಾಯಣ ಗುರು ಮಂದಿರದ ಮಾಜಿ ಕಾರ್ಯನಿರ್ವಹಣಾಧಿಕಾರಿ ಉದಯ ಕೋಲಾಡಿ, ಬಿಲ್ಲವ ಸಂಘದ ಗೌರವ ಸಲಹೆಗಾರ ಆನಂದ ಪೂಜಾರಿ ಕೇರ್ಪುಡೆ, ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಜಯಂತಿ ನಂದೋಳಿ, ರೆಂಜಿಲಾಡಿ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ, ಕೊಡಿಂಬಾಳ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಬಾಬು ಪೂಜಾರಿ ಉಂಡಿಲ, ಕುಟ್ರುಪಾಡಿ-ಕಡಬ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ದೋಳ, ಕಡಬ ಬಿಲ್ಲವ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಶಿವಪ್ರಸಾದ್ ಐತ್ತೂರು, ಯುವವಾಹಿನಿ ಕಡಬ ಘಟಕದ ಅಧ್ಯಕ್ಷ ಉಮೇಶ್ ಬಳ್ಪ, ಕಾರ್ಯದರ್ಶಿ ಸತೀಶ್ ಕೊರಪ್ಪಣೆ, ಸುಬ್ರಹ್ಮಣ್ಯದ ಕರ್ನಾಟಕ ಬ್ಯಾಂಕ್ ಸಿಬ್ಬಂದಿ ನಾಗೇಶ್ ಬಳ್ಪ ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಮೇದಪ್ಪ ಪೂಜಾರಿ ನಂದೋಳಿ, ಶೇಖರ ಪೂಜಾರಿ ಐತ್ತೂರು, ಮಾನ್ವಿ ಉಂಡಿಲ ಹಾಗೂ ಪೂರ್ವಿ ಉಂಡಿಲ ಉಪಸ್ಥಿತರಿದ್ದರು.





