Connect with us

ಇತರ

ಬಡವರ ಪಾಲಿಗೆ ಬೆಳಕಾಗಿದ್ದ ನರರೋಗ ತಜ್ಞೆ ಇನ್ನಿಲ್ಲ: ಡಾ. ಕುಂಕಾಲ ಲಾವಣ್ಯರ ನಿಸ್ವಾರ್ಥ ಸೇವೆಗೆ ನೆಟ್ಟಿಗರ ಸಲಾಂ

Published

on

ಮನುಷ್ಯ ಇನ್ನಿಲ್ಲವಾಗಬಹುದು, ಆದರೆ ಆತ ಸಮಾಜದ ಒಳಿತಿಗೆ ಮಾಡಿದ ಕಾರ್ಯಗಳು ಸದಾ ಜೀವಂತವಾಗಿರುತ್ತವೆ. ಅವರ ಕಾರ್ಯಗಳಿಂದಳೇ ನಮ್ಮನ್ನಗಲಿದವರು ಜೀವಂತವಾಗಿರುತ್ತಾರೆ ಎಂಬ ಮಾತಿದೆ. ಅದೇ ರೀತಿ ಇಲ್ಲೊಬ್ಬ ವೈದ್ಯೆ ಇತರರ ಜೀವ ಉಳಿಸಲು ಜೀವ ಮುಡಿಪಾಗಿಟ್ಟಿದ್ದರು. ಆದರೆ ವಿಧಿಯಾಟಕ್ಕೆ ಅವರೇ ಬಲಿಯಾಗಿದ್ದಾರೆ. ಅವರ ಸತ್ಕಾರ್ಯಗಳು ಜೀವಂತವಾಗಿವೆ. ನರರೋಗ ತಜ್ಞೆ ಮತ್ತು ಜನಪ್ರಿಯ ವೈದ್ಯಕೀಯ ಪ್ರಭಾವಿ ವ್ಯಕ್ತಿಯಾಗಿದ್ದ ಡಾ. ಕುಂಕಾಲ ಲಾವಣ್ಯ ಅವರು, ಕೇವಲ 32ನೇ ವಯಸ್ಸಿನಲ್ಲಿ ಹಠಾತ್ ಮಿದುಳಿನ ಪಾರ್ಶ್ವವಾಯುವಿಗೆ ತುತ್ತಾಗಿ ನಿಧನರಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಗವಂತ ಕರುಣಿಸಿದ್ದು 32 ವರ್ಷ ಆಯಸ್ಸು ಈ ವೈದ್ಯೆ ಡಾ. ಕುಂಕಾಲ ಲಾವಣ್ಯ ಅವರು ತಮ್ಮ ಇಡೀ ಜೀವನವನ್ನು ಇತರ ಜೀವ ಉಳಿಸಲು, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸೇವೆ ನೀಡಲು ಮುಡಿಪಾಗಿಟ್ಟಿದ್ದರು. ಸಣ್ಣ ವಯಸ್ಸಿನಲ್ಲಿ ಸಮಯದ ಕುರಿತು ತುಡಿತ ಹೊಂದಿದ್ದರು. ಮುಂದೆ ಭವಿಷ್ಯದಲ್ಲಿ ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲು ಇಚ್ಛಿಸಿದ್ದರು ಎನ್ನಲಾಗಿದೆ. ಆದರೆ ಅವರ ಪಾಲಿಗೆ ವಿಧಿಯಾಟವೋ ಬೇರೆಯಾಗಿತ್ತು. ಭಗವಂತ ಕರುಣಾಮಯಿ ವೈದ್ಯೆಗೆ ನೀಡಿದ್ದು ಕೇವಲ 32 ವರ್ಷ ಆಯಸ್ಸು ಮಾತ್ರ. ಬಡವರ ಪಾಲಿಗೆ ಬೆಳಕಾಗಿದ್ದ ವೈದ್ಯೆ ಈ ವಿಚಾರವನ್ನು ಲಿಂಕ್ಡ್‌ ಇನ್‌ನಲ್ಲಿ Mohd Intzar Ali ಎನ್ನುವವರು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಪ್ರಕಾರ, ಮೃತ ವೈದ್ಯೆಯು, ಅವರು ಕೇವಲ ಒಬ್ಬ ವೈದ್ಯರಾಗಿರಲಿಲ್ಲ. ಅಸಂಖ್ಯಾತ ಜನರಿಗೆ ಅವರು ಭರವಸೆಯ ಬೆಳಕಾಗಿದ್ದರು. ಅಗತ್ಯವಿದ್ದವರಿಗೆ ಅವರು ಉಚಿತ ವೈದ್ಯಕೀಯ ಸಮಾಲೋಚನೆಗಳನ್ನು ನೀಡುತ್ತಿದ್ದರು. ಬಡವರಿಗೆ ಸಹಾಯ ಮಾಡಲು ತಮ್ಮ ವೃತ್ತಿ, ಜ್ಞಾನವನ್ನು ಬಳಸುತ್ತಿದ್ದರು.

ಬಡವರ ಮೇಲೆ ಅಪಾರ ದಯೆ, ಸಹಾನುಭೂತಿ ಹೊಂದಿದ್ದು, ನಿಸ್ವಾರ್ಥ ಸೇವೆಯ ಮೂಲಕ ಅವರು ಅನೇಕರ ಬದುಕನ್ನು ಹಸನು ಮಾಡಿದ್ದರು. ತಮ್ಮ ಕೆಲಸಗಳಿಂದಲೇ ಅಪಾರ ಜನರಿಗೆ ಹತ್ತಿರವಾಗಿದ್ದರು. ಇಂದು ಅವರು ಈ ಜಗತ್ತನ್ನು ಅಕಾಲಿಕವಾಗಿ ತೊರೆದಿರಬಹುದು. ಆದರೆ ಅವರ ದಯೆ ಮತ್ತು ಒಳಿತಿನ ನೆನಪುಗಳು ಸದಾ ಜೀವಂತವಾಗಿರುತ್ತವೆ. ಒಬ್ಬರ ಜೀವನ ಕೊನೆಗೊಳ್ಳಬಹುದು, ಆದರೆ ನಾವು ಮಾಡಿದ ಒಳ್ಳೆಯ ಕೆಲಸಗಳು ಎಂದಿಗೂ ಅಳಿಸಿಹೋಗುವುದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲ ಎಂದು ಪ್ರಾರ್ಥಿಸಲಾಗಿದೆ.

ನೆಟ್ಟಿಗರಿಂದ ಸಂತಾಪ, ಹೇಳಿದ್ದೇನು? ಒಬ್ಬ ವ್ಯಕ್ತಿಯ ಪ್ರಭಾವವನ್ನು ಅವರು ಎಷ್ಟು ವರ್ಷ ಬದುಕಿದ್ದಾರೆ ಎಂಬುದರ ಮೇಲೆ ಅಳೆಯಲು ಸಾಧ್ಯವಿಲ್ಲ. ಅವರ ಕಾರ್ಯಗಳಿಂದ ಅಳೆಯಬೇಕು ಎಂಬ ಮಾತಿಗೆ ಇವರ ಸಾವು ನಿದರ್ಶನವಾಗಿದೆ. ಮೃತ ವೈದ್ಯೆ ಅನೇಕ ಬಡವರ ಮೇಲೆ ತೋರಿದ ಸಹಾನುಭೂತಿ ಮತ್ತು ಸೇವಾ ಮನೋಭಾವವು ಅವಿಸ್ಮರಣೀಯ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಪ್ರೀತಿಪಾತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ನೆಟ್ಟಿಗರು ಪ್ರಾರ್ಥಿಸಿದ್ದಾರೆ. ಸಮಾಜ, ಜನರ ಸೇವೆಗೆ ಮೀಸಲಾದ ಜೀವನವು ಕಾಲ ಉರುಳಿದ ಮೇಲೂ ಅಳಿಯದೇ ಉಳಿದಿರುತ್ತದೆ. ಅಂಥದ್ದೊಂದು ಪರಂಪರೆಯನ್ನು ಇವರು ಬಿಟ್ಟುಹೋಗುತ್ತದೆ. ಅವರ ದಯೆ ಮತ್ತು ಸಹಾನುಭೂತಿ ಸ್ಮರಣೀಯ ಎಂದು ತಿಳಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement