Published
2 years agoon
By
Akkare News
ಪುತ್ತೂರು: ಪುತ್ತೂರು ರೈಲ್ವೆ ನಿಲ್ದಾಣ ಹಾಗೂ ರೈಲ್ವೆ ಮಾರ್ಗದ ಅಗತ್ಯ ಕೆಲಸಗಳ ಬಗ್ಗೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ರೈಲ್ವೇ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ಮಂಗಳೂರಿನಲ್ಲಿ ಮನವಿ ಮಾಡಿದರು.
ಕಬಕ ಪುತ್ತೂರು ಆದರ್ಶ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂನಲ್ಲಿ ಮಳೆ ಹಾಗೂ ಬಿಸಿಲಿಗೆ ರಕ್ಷಣೆ ನೀಡಲು ಶೆಲ್ಟರ್ ವ್ಯವಸ್ಥೆ,ಕಬಕ ಪುತ್ತೂರು ಆದರ್ಶ ರೈಲ್ವೆ ಸ್ಟೆಷನ್ ಗೆ ಸಿ ಸಿ ಟಿವಿವ್ಯವಸ್ಥೆ, ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ನಿಲುಗಡೆಯಾದಗಜನರೇಟರ್ ವ್ಯವಸ್ಥೆ, ಕಬಕ ಪುತ್ತೂರು ಆದರ್ಶ ರೈಲ್ವೆಸ್ಟೇಷನ್ನಲ್ಲಿ ಪ್ರಯಾಣಿಕರ ರೈಲು ಕೇವಲ 2 ನಿಮಿಷ ತಂಗುವ ಬದಲು ಕನಿಷ್ಠ 5 ನಿಮಿಷ ತಂಗುವ ವ್ಯವಸ್ಥೆ ಆಗಬೇಕು,
ಮಂಗಳೂರು-ಕಬಕ-ಪುತ್ತೂರು ಬೆಳಿಗ್ಗೆ 6.40ಕ್ಕೆ ಬರುವಪ್ರಯಾಣಿಕರ ರೈಲನ್ನು ಸುಬ್ರಹ್ಮಣ್ಯ ತನಕ ವಿಸ್ತರಣೆಮಾಡಬೇಕು, ವುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸಾಮೆತ್ತಡ್ಕ
ಹಾಗೂ ಪುತ್ತೂರು ಕ್ಲಬ್ ಇಲ್ಲಿರುವ ರೈಲು ಕ್ರಾಸಿಂಗ್ ಇದಕ್ಕೆಓವರ್ ಬ್ರಿಡ್ಜ್ ಅಥವಾ ಅಂಡರ್ ಬ್ರಿಡ್ಜ್ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.